ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಮಹಿಳಾ ಗ್ರಾಮಸಭೆ” ಯು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಇವರ ಅಧ್ಯಕ್ಷತೆಯಲ್ಲಿ ಜರಗಿತು.ಸಭೆಯಲ್ಲಿ “ಮಹಿಳೆ ಮತ್ತು ಕಾನೂನು” ಬಗ್ಗೆ ನ್ಯಾಯವಾದಿ ಲತಾಕುಮಾರಿ ಅವರು ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಆಗುವ ಶೋಷಣೆಯನ್ನು ತಪ್ಪಿಸಲು ಮತ್ತು ಭಯವನ್ನು ಹೋಗಲಾಡಿಸಲು ಕಾನೂನಿನ ಅರಿವು ಹೊಂದಿರಬೇಕು. ಹಲವು ದೌರ್ಜನ್ಯವನ್ನು ತಪ್ಪಿಸಲು ಇಂದಿನ ದಿನಗಳಲ್ಲಿ ಹೊಸ ಹೊಸ ಕಾನೂನನ್ನು ಜಾರಿಗೆ ತರಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ 14ನೇ ವಿಧಿಯಲ್ಲಿ ಬರುವ ಸಮಾನತೆಯ ಬಗ್ಗೆ ತಿಳಿಸಿದರು. ಎನ್.ಆರ್.ಎಲ್.ಎಂ ನ ಮೇರಿ ಎಸ್ ಅವರು ಸಂಜೀವಿನಿ ಒಕ್ಕೂಟದ ಮೂಲಕ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು ಎಂದರು.”ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಬಗ್ಗೆ ಡಾ. ಅಶ್ವತಿ,ತಾಳೆ ಕೃಷಿಯ ಬಗ್ಗೆ ಆಲೆಟ್ಟಿ ಗ್ರಾಮದ ಪ್ರಗತಿಪರ ಕೃಷಿಕರಾದ ಅಶೋಕ್ ಪ್ರಭು, ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ, ಕಾನೂನು ಬಗ್ಗೆ ದೀಪಿಕಾ ಪಿ, ಮಹಿಳಾ ಸಬಲೀಕರಣದ ಬಗ್ಗೆ ಅನುಷ್ಯ ಸ್ವಸಹಾಯ ಸಂಘಗಳ ಬಗ್ಗೆ ಅವಿನಾಶ್ ಡೆಲ್ಲಾರಿಯೋ, ಬ್ಯಾಂಕ್ ನಿಂದ ಸಿಗಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಸುಜಾತ ಮಾಹಿತಿ ನೀಡಿದರು.
ಶಿಲ್ಪಾ ಸನತ್ ಅಧ್ಯಕ್ಷರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ, ತಾಳೆ ಬೆಳೆ ಕೃಷಿ ಆಯಿಲ್ ಕಂಪನಿಯ ಕ್ಲಸ್ಟರ್ ಸೂಪರ್ ವೈಸರ್, ರವಿಶಂಕರ್ ಮಾಹಿತಿ ನೀಡಿದರು.
ಪುಷ್ಪಲತಾ ಕೆ ಆರ್ ಅರಂತೋಡು, ಚಿತ್ರಾಗೂನಡ್ಕ, ಹರ್ಷಿತ ಗೂನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಲೆಸ್ಸಿ ಮೊನಾಲಿಸಾ, ಜಗದೀಶ್ ರೈ, ರಜನಿ ಶರತ್, ಸುಶೀಲಾ ಪಿ, ಮಾಜಿ ಅಧ್ಯಕ್ಷರಾದ ಯಮನ ಬಿ ಎಸ್, ಸುಂದರಿ ಮುಂಡಡ್ಕ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮಸ್ಥರು ಮತ್ತು ಮಹಿಳೆಯರು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸರಿತಾ ಓಲ್ಲಾ ಡಿ’ಸೋಜಾ ಎಲ್ಲರನ್ನೂ ಸ್ವಾಗತಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಜನಿ ಶರತ್ ವಂದಿಸಿದರು.
ಸಂಪಾಜೆ : ಮಹಿಳಾ ಗ್ರಾಮ ಸಭೆ














































