ಪೂಜೆಯ ವೇಳೆ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ನಗರದ ಮೇರಿಹಿಲ್ ಸಮೀಪದ ಗುರುನಗರ ಎಂಬಲ್ಲಿನ ಸರೋಜಿನಿ (64) ಎಂಬವರು ಮೃತಪಟ್ಟಿದ್ದಾರೆ, ಅವರನ್ನು ರಕ್ಷಿಸಲ ಬಂದ ಪುತ್ರ ಅಕ್ಷಯ್ (20)ಗೆ ಗಾಯವಾಗಿದೆ.
ಮಂಗಳವಾರ ರಾತ್ರಿ ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಸರೋಜಿನಿಯ ಬಟ್ಟೆಗೆ ಬೆಂಕಿ ತಗುಲಿತ್ತು. ಈ ವೇಳೆ ಪುತ್ರ ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಆತನಿಗೂ ಬೆಂಕಿಯಿಂದ ಸುಟ್ಟಗಾಯವಾಗಿತ್ತು. ವಿಷಯ ತಿಳಿದ ನೆರೆಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜೆಯ ವೇಳೆ ಬೆಂಕಿ ತಗುಲಿದ ಮಹಿಳೆ ಸಾವು

















