ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ಮಾಜಿ ಜಿಲ್ಲಾ ಪರಿಷತ್ ಸದಸ್ಯ. ಎಣ್ಣೂರು ಮಸೀದಿಯ ಗೌರವಾಧ್ಯಕ್ಷರಾಗಿರುವ ನ್ಯಾಯವಾದಿ ಹಾಗೂ ನೋಟರಿ . ಕುಂಪಳ್ಳಿಯವರು ಶುಕ್ರವಾರ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಇತಿಹಾಸ ಪ್ರಸಿದ್ದ ಐವತ್ತೊಕ್ಲು ಪಟೇಲ್ ಮನೆಯವರಾದ ಕುಂಪಳ್ಳಿಯವರು ವಯೋಸಹಜ ಅಸೌಖ್ಯದಿಂದಿದ್ದು, ಪೈಚಾರಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
ಅಂತ್ಯ ಸಂಸ್ಕಾರಕ್ಕೆ ಅವರ ಪಾರ್ಥಿವ ಶರೀರವನ್ನು ಐವತ್ತೊಕು ಗ್ರಾಮದ ಅವರ ಐವತ್ತೊಕ್ಲು ಮನೆಗೆ ಕೊಂಡೊಯ್ಯಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.
ನ್ಯಾಯವಾದಿ ಹಾಗೂ ನೋಟರಿ ಕುಂಜಿಪಳ್ಳಿ ನಿಧನ

















