ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿ ವೇಲು ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕೆ. ಡಿ. ಪಿ. ಸಭೆ ನಡೆಯಿತು ಸಬೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸಾಮಾಜಿಕ ಅರಣ್ಯ, ಕಂದಾಯ,, ಕೃಷಿ, ಪಶು ವೈದ್ಯಕೀಯ ಇಲಾಖೆ, ಶಿಕ್ಷಣ, ಅರೋಗ್ಯ ಇಲಾಖೆ ಮೆಸ್ಕಾಂ,, ಸೊಸೈಟಿ, ಡಿ. ಸಿ. ಸಿ ಬ್ಯಾಂಕ್, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಇಲಾಖಾ ಮಾಹಿತಿ ನೀಡಿದರು
ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ .ನಿತಿನ್ ಪ್ರಭು ರವರಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಬೀದಿ ನಾಯಿ ಹಾವಳಿ, ಬಿಡಾಡಿ ದನಗಳ ಹಾವಳಿ ಬಗ್ಗೆ ಚರ್ಚೆ ನಡೆಯಿತು ಹಾಗೂ ಕಲ್ಲುಗುಂಡಿ ಪೊಲೀಸ್ ಠಾಣೆಯಲ್ಲಿ ಬೀದಿ ನಾಯಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದೆ ಹಾಗೂ ಅದಕ್ಕೆ ಚುಚ್ಚು ಮದ್ದು ನೀಡಲು ತಿಳಿಸಿದರು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಕರಣಿ ಯವರಲ್ಲಿ
ಸಾಮಾಜಿಕ ಅರಣ್ಯದಲ್ಲಿ ಬಾಕಿ ಇರುವ ಅಕೇಶಿಯ ಮರದ ತೆರವು ಬಗ್ಗೆ ಹಣ್ಣು ಹಂಪಲು ಮರ ಬೆಳೆಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು
ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಯವರು ಮಹಿತಿ ನೀಡಿದರು ವಿವಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು
ಗ್ರಾಮ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ,ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸದಸ್ಯರುಗಳಾದ ಜಗದೀಶ್ ರೈ ,ಸುಂದರಿ ಮುಂಡಡ್ಕ ರಜನಿ ಶರತ್,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅನುಪಮ, PACS CEO ವೀರೇಂದ್ರ ಜೈನ್ , ಕಲ್ಲುಗುಂಡಿ ಆರ್.ಎಂ.ಎಸ್.ಎ ಪ್ರೌಢಶಾಲೆ ಮುಖ್ಯ ಗುರುಗಳಾದ ಚಂದ್ರಾವತಿ, ದ.ಕ.ಜಿ.ಪ.ಹಿರಿಯ ಪ್ರಾಥಮಿಕ. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ, ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ), ಗ್ರಂಥಾಲಯ ಸಹಾಯಕಿ ನಸೀಮಾ, ಸಿಬ್ಬಂದಿ ಮಧುರ, ಅರೋಗ್ಯ ಇಲಾಖೆಯ ಹರ್ಷಿತಾ ಕುಮಾರಿ, ರಾಜರಾಂಪುರ ಶಾಲಾ ಪ್ರಭಾರ ಮುಖ್ಯ ಗುರುಗಳಾದ ಭವಾನಿ ಶಂಕರ್, ಡಿ.ಸಿ.ಸಿ ಬ್ಯಾಂಕಿನ ಸಿಬ್ಬಂದಿ ನವೀನ್ ,ಗ್ರಾಮ ಸಹಾಯಕ ಸೋಮನಾಥ್, ಮೆಸ್ಕಾಂ ಇಲಾಖೆಯ ಸಂಗಮೇಶ್ ಉಪಸ್ಥಿತರಿದ್ದರು.
ಸಂಪಾಜೆ : ಗ್ರಾಮ ಪಂಚಾಯತ್ ಕೆಡಿಪಿ ಸಭೆ

















