ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿದ ನೀಡಿದ ವ್ಯಕ್ತಿ ಜಡ್ಜ್ ಮುಂದೆ ಜುಲೈ11 ರಂದು ಸಂಜೆ 4:40 ರಿಂದ 6 ಗಂಟೆವರೆಗೆ ಒಟ್ಟು 1 ಗಂಟೆ 20 ನಿಮಿಷ ಹೇಳಿಕೆ ನೀಡಿ ಬಳಿಕ ಹೇಳಿಕೆಯ ಪತ್ರಿಗೆ ಸಹಿ ಹಾಕಿ ವಕೀಲರ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತನಿಖೆಗಾಗಿ ಕಾರಿನಲ್ಲಿ ತೆರಳಿದ್ದಾರೆ.
ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್.ಕೆ ಮುಂದೆ ದೂರುದಾರ ವ್ಯಕ್ತಿ ಒಬ್ಬನೇ ಹಾಜರಾಗಿ BNS 183 ಹೇಳಿಕೆ ನೀಡಿದ್ದಾರೆ.
ಇನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಂಗಳೂರು ಎಫ್‌ಎಸ್ ಎಲ್ ತಂಡದ ಮೂವರು ಸೋಕೋ ಸಿಬ್ಬಂದಿ ಆಗಮಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ದೂರು ನೀಡಿದ ವ್ಯಕ್ತಿ ನ್ಯಾಯಾಧೀಶರ ಮುಂದೆ ಹೇಳಿದ್ದೇನು

















