ಬೆಂಕಿ ಅವಘಡ ಸಂಭವಿಸಿ ಅರಂತೋಡು ಘನ ತಾಜ್ಯ ಘಟಕ ಸುಟ್ಟು ಹೋಗಿದ್ದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಕು. ಭಾಗೀರಥಿ ಮುರುಳ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ಕಾರ್ಭಾರಿಯವರು ಜುಲೈ 11 ರಂದು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡಕೊಂಡರು.
ಬಳಿಕ ಅವರುಗಳು ಘಟನೆಯ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನೂತನ ಘನ ತಾಜ್ಯ ನಿರ್ಮಾಣ, ಹಾಗೂ ಶೀಘ್ರವೇ ಸರಕಾರದ ಗಮನಕ್ಕೆ ತಂದು ಅನುದಾನವನ್ನು ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಶಾಸಕರು ಈ ಘಟಕವು ಮಾದರಿ ಘನತಾಜ್ಯ ನಿರ್ವಹಣಾ ಘಟಕವಾಗಿತ್ತು. ಅದರೆ ಈ ದುರಂತದಿಂದ ಬಹಳಷ್ಟು ನಷ್ಟ ಉಂಟಾಗಿದೆ ಸರಕಾರದಿಂದ ಯಾವುದಾದರೂ ಅನುದಾನವನ್ನು ಕೊಡಿಸುವ ಪ್ರಯತ್ನವನ್ನು ಮಾಡುತ್ತೆನೆ ಎಂದು ಹೇಳಿದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳಾದ ಫಯಾಜ್, ಚೈತ್ರ, ಮಣಿಕಂಠ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷರಾದ ಭವಾನಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಆರ್. ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ, ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ, ಸ್ಥಳೀಯ ಮುಖಂಡರಾದ ಸೋಮಶೇಖರ್ ಪೈಕ, ಭಾರತಿ ಪುರುಷೋತ್ತಮ್ ಉಳುವಾರು ಇತರರು ಉಪಸ್ಥಿತರಿದ್ದರು.
ಅರಂತೋಡು : ಬೆಂಕಿ ಅವಘಡ ಸಂಭವಿಸಿದ ಘನ ತ್ಯಾಜ್ಯ ವಿಲೇವಾರಿ ಘಟಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

















