ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವುಆ. 3 ರಂದು ಸುಳ್ಯದ ಕೋಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಲಿದೆ ಎಂದು ಸಂಘಟನೆಯ ನಗರ ಸಮಿತಿ ಸದಸ್ಯ ರಾಕೇಶ್ ಕುಂಟಿಕಾನ ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮೂಲಕ ಈ ಬಾರಿಯ ಆಟಿ ಆಚರಣೆಯನ್ನು ನಡೆಸುವ ಬಗ್ಗೆ ಅವರು ಮಾಹಿತಿ ನೀಡಿದರು.
13ನೇ ವರ್ಷದ ಆಟಿ ಆಚರಣೆಯನ್ನು ಈ ಬಾರಿ ನಾಟಿ ವೈದ್ಯರಾದ ಜನಾರ್ಧನ ಗೌಡ ಸೂಂತೋಡು ಮತ್ತು ಶ್ರೀಮತಿ ವಸಂತಿ ದಂಪತಿಯವರು ಉದ್ಘಾಟಿಸಲಿದ್ದಾರೆ.
ಯುವ ಸೇವಾ ಸಂಘದ ಅಧ್ಯಕ್ಷ ಪಿ. ಎಸ್. ಗಂಗಾಧರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ನ್ಯಾಯವಾದಿ ರಾಮಕೃಷ್ಣ ಅಮೈ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ವಯೋಮಾನದವರಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಲಾಗುವುದು.
ಸಮಾರೋಪ ಸಮಾರಂಭ ದಲ್ಲಿ ಆಟಿ ತಿಂಗಳ ಮಹತ್ವದ ಕುರಿತು ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಚಂದ್ರಶೇಖರ ಪೇರಾಲು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ, ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ. ಸಿ ಸದಾನಂದ ರವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಕೇಶವ ಸುಳ್ಳಿ, ಎಂ. ಡಿ ನಿರಂಜನ್, ನವೀತ್ ಕಂದಡ್ಕ, ಡಾ. ಅಭಿಜ್ಞಾ, ತಿಮ್ಮಪ್ಪ ಗೌಡ ನಾವೂರು, ಮಾಯಿಲಪ್ಪ ಗೌಡ ಸೂಂತೋಡು, ಕು. ಸೋನಾ ಅಡ್ಕಾರ್, ಕು. ಭೂಮಿಕಾ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ. ಎಸ್. ಗಂಗಾಧರ್ ರವರು
13 ವರ್ಷಗಳ ಹಿಂದೆ ನಗರ ಸಮಿತಿಯ ಅಧ್ಯಕ್ಷರಾಗಿದ್ದ ದಿ. ಸಂತೋಷ್ ಮಡ್ತಿಲ ರವರು ಪ್ರಥಮ ಬಾರಿಗೆ ಆಟಿ ಕೂಟವನ್ನುಪ್ರಾರಂಭಿಸಿದವರು. ಪ್ರತಿ ಬಾರಿ ಆಟಿಯ ಆಚರಣೆ ಸಂದರ್ಭದಲ್ಲಿ ಅವರ ನೆನಪು ಕಾಡುತ್ತದೆ. ಸಮುದಾಯದ ಎಲ್ಲರನ್ನು ಒಟ್ಟು ಸೇರಿಸುವ ಹಾಗೂ ನಮ್ಮ ಆಚಾರ ವಿಚಾರಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಆಟಿ ಕೂಟ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ತೀರ್ಥರಾಮ ಆಡ್ಕಬಳೆ, ಶ್ರೀಮತಿ ಹರ್ಷ ಕರುಣಾಕರ ರವರು ಉಪಸ್ಥಿತರಿದ್ದರು.
ಆಗಸ್ಟ್ 3ಕ್ಕೆ ಗೌಡರ ಯುವ ಸೇವಾ ಸಂಘದಿಂದ ಆಟಿ ಆಚರಣೆ ಸಂಭ್ರಮ ಕಾರ್ಯಕ್ರಮ

















