ಸುಳ್ಯ ಗೌಡರ ಯುವ ಸೇವಾ ಸಂಘ(ರಿ) ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವುಆ. 3 ರಂದು ಸುಳ್ಯದ ಕೋಡಿಯಾಲ ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೊಡಿಯಾಲ ಬೈಲು ಆಡಳಿತ ಸಮಿತಿ ಅಧ್ಯಕ್ಷರು ರಾಮಕೃಷ್ಣ ಅಮೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷತೆ ವಹಿಸಿದ ಪಿ.ಎಸ್ ಗಂಗಾಧರ ಪ್ರಾಸಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಗೌಡ ಸಮಿತಿಯ ಅಧ್ಯಕ್ಷ ರಾಕೇಶ್ ಕುಂಟಿಕಾನ , ಗೌಡರ ಯುವ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕ ಬಳೆ ,ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ , ತಾಲೂಕು ಮಹಿಳಾ ಘಟಕದ ಅಧ್ಯಕ್ಷರು ವಿನೂತ ಪಾತಿಕಲ್ಲು, , ಮಹಿಳಾ ನಗರ ಘಟಕ ಕಾರ್ಯದರ್ಶಿ ಸುಜಾತ ಕಿರಣ ಕುರುಂಜಿ , ಸಮಿತಿಯ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ನಗರ ಘಟಕ ಅಧ್ಯಕ್ಷರಾದ ಶ್ರೀಮತಿ ಹರ್ಷಾ ಕರುಣಾಕರ ಸರ್ವರನ್ನು ಸ್ವಾಗತಿಸಿ, ನಗರ ಗೌಡರ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ ಧನ್ಯವಾದಿಸಿ ,ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಟoಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪುರುಷರಿಗೆ , ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು , ಹಾಗೂ ಮಧ್ಯಾಹ್ನ ಬಳಿಕ ಸಮಾರೋಪ ಸನ್ಮಾನ ಕಾರ್ಯಕ್ರಮ ನಡೆಯಿತು.
ಸುಳ್ಯ ಗೌಡರ ಯುವ ಸೇವಾ ಸಂಘದ 13 ನೇ ವರ್ಷದ ಆಟಿ ಸಂಭ್ರಮ ಉದ್ಘಾಟನೆ



































