ವಿಷ ಜಂತು ಕಡಿದು ಬಾಲಕಿ ಸಾವು

ವಿಷಪೂರಿತ ಹಾವು ಕಡಿದು 8 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಕುಂಶೇಡಿಮನೆ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಶೇಡಿಮನೆಯ ಬೆಪ್ಪರೆ ಗುಡ್ಡೆಯಂಗಡಿ ನಿವಾಸಿ ಶ್ರೀಧರ್ ಮಡಿವಾಳ ಅವರ ಪುತ್ರಿ ಸನ್ನಿಧಿ ಎಂದು ಗುರುತಿಸಲಾಗಿದೆ.
ಸನ್ನಿಧಿ ಆಗಸ್ಟ್ 3 ರಂದ ಶಾಲೆಗೆ ರಜೆಯಿದ್ದ ಕಾರಣ, ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ ವಿಷಪೂರಿತ ಹಾವೊಂದು ಆಕೆಗೆ ಕಚ್ಚಿದೆ. ಈ ಸಂದರ್ಭದಲ್ಲಿ ಹುಡುಗಿ ನೋವಿನಿಂದ ಕಿರುಚುತ್ತಾ, ಮನೆಗೆ ಓಡಿದ್ದು, ಕುಟುಂಬದ ಸದಸ್ಯರು ತಕ್ಷಣ ಆಕೆಯನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರದಲ್ಲಿ ಆಕೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಲುವಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಅದೇ ದಿನ ನಿಧನಳಾಗಿದ್ದಾಳೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top