ಕರ್ನಾಟಕ, ಕೇರಳ ಮಲೆನಾಡ ಅಭಿವೃದ್ಧಿಗೆ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಇಲ್ಲಿ ಕಾಣುವ ಈ ಗುಂಪು ಛಾಯಾಚಿತ್ರ ಕೇರಳ ಕರ್ನಾಟಕ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು,ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು,ರಾಜಕೀಯ ರಹಿತವಾಗಿ ಜಾತ್ಯತೀತ ನೆಲೆಯಲ್ಲಿ ಕರ್ನಾಟಕ, ಕೇರಳ ಮಲೆನಾಡ ಅಭಿವೃದ್ಧಿಗೆ ಭವಿಷ್ಯದಲ್ಲಿ ಒಂದೇ ಸರಪಳಿಯ ಕೊಂಡಿಯಾಗಿ ಜೋಡಣೆಯಾದವರು.
ಇಂದು ಕೇರಳದ ಕಾಸರಗೋಡು ಮಲೆನಾಡು ಅಭಿವೃದ್ಧಿ ಸಮಿತಿ ಸುಳ್ಯದ ಬಡ್ಡಡ್ಕ ಸಹಕಾರಿ ಸಭಾ ಭವನದಲ್ಲಿ ಆಯೋಜಿಸಿದ ಸಭೆಯಲ್ಲಿ ಮುಂದೆಗೆ ಅಂತರ್ರಾಜ್ಯ ಬೆಸೆಯುವ ನೂತನ ರಸ್ತೆಯೊಂದನ್ನು ಅಭಿವೃದ್ಧಿ ಪಡಿಸಲು ಒಂದೇ ಸರಪಳಿಯ ಕೊಂಡಿಯಾಗಿ ಶ್ರಮಿಸಲು ಪಣ ತೊಟ್ಟ ಮುಂದಾಳುಗಳು. ಕೇರಳದ ಪಾಣತ್ತೂರು ಕೇರಳ ಹೆದ್ದಾರಿಯಿಂದ ಕಲ್ಲಪಲ್ಲಿ,ಕರ್ನಾಟಕ ದಕ ಜಿಲ್ಲೆಯ ಸುಳ್ಯ ತಾಲೂಕಿನ ಬಡ್ಡಡ್ಕ, ಕೂರ್ನಡ್ಕ,ಕೊಡಗು ಜಿಲ್ಲೆಯ ಕುಂದಲ್ಪಾಡಿಯಲ್ಲಿ ಸೇರಿ ಕುಂಬಳಚೇರಿ, ಮಾರ್ಗವಾಗಿ ಪೆರಾಜೆ ಕಾಸ್ಪಾಡಿ 275 ರ ರಾಜ್ಯ ಹೆದ್ದಾರಿಗೆ ಸೇರುವ ಪ್ರಸ್ತುತ ರಸ್ತೆಯನ್ನು ಕೇಂದ್ರ, ರಾಜ್ಯ ಸರಕಾರ ಅನುದಾನದಿಂದ ಹಣ ವಿನಿಯೋಗಿಸಿ 12,15 ಮೀಟರ್ ಅಳತೆಯ ಮೇಲ್ದರ್ಜೆಯ ಅಂತರ್ರಾಜ್ಯ ರಸ್ತೆಯಾಗಿ ರೂಪುಗೊಳಿಸುವ ನೂತನ ಯೋಜನೆಗೆ ಇಂದಿನಿಂದಲೇ ಯಶಸ್ವಿಗೆ ಸಿದ್ದವಾದ ಕಾರ್ಯ ಪಡೆ.
ಸಮಾಜ ಸೇವೆ ಎನ್ನುವ ಎಲ್ಲಾ ಹೋರಾಟ ಗಳನ್ನು ತೊರೆದು ಮನೆ ಸೇರಿದ ನನ್ನನ್ನು ಮತ್ತೆ ಕರೆದು ಕುಳ್ಳಿರಿಸಿದರು.
ಜನರಿಗೆ ನಾವು ಬೇಕು ಎಂದಾಗ. ಹಿಂಜರಿಯದೆ ಒಪ್ಪಿಗೆ ನೀಡಿ ಎಲ್ಲರೊಂದಿಗೆ ಒಂದಾದೆ.
ಸಭೆಯಲ್ಲಿ ಮಲೆನಾಡು ಅಭಿವೃದ್ಧಿ ಸಮಿತಿ ಕೇವಲ ಒಂದು ರಸ್ತೆ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿರದೆ ಕೊಡಗು, ದಕ, ಕಾಶರಗೋಡು ಮಲೆ ನಾಡಿನ ಸರ್ವತೋಮುಖ ಅಭಿವೃದ್ಧಿ ಕಾರ್ಯ ಕ್ಕೆ ಸಿದ್ದವಿರಬೇಕು. kanchngad ಸುಳ್ಯ,ಸಕಲೇಶಪುರ ರೈಲ್ ಮಾರ್ಗ, ಕಸ್ತೂರಿರಂಗನ್ ವರದಿಯ ಸಾಧಕ. ಭಾದಕ ಅರಿಯುವಂತಿರಬೇಕು, ಅಲ್ಲದೆ ಉದ್ದೇಶಿತ ರಸ್ತೆ ಅಗಲಿಕರಣ ಸಂಧರ್ಭದಲ್ಲಿ ಭೂಮಿ ಕಳೆದು ಕೊಳ್ಳುವ ಭೂ ಮಾಲೀಕರಿಗೆ ಪರಿಹಾರ ನೀಡುವ ಕಡೆ ಗಮನಿಸಬೇಕು. ರಸ್ತೆ ಮೇಲ್ದರ್ಜೆ ಮಾಡುವ ಸಮಯದಲ್ಲಿ ಸರ್ಕಾರಗಳು ಅರಣ್ಯ ಇಲಾಖೆ ಅಡ್ಡಿ ಯಾಗದಂತೆ ನೋಡಿಕೊಳ್ಳಲು ಸರ್ಕಾರ ಅರಣ್ಯ ಇಲಾಖೆಗೆ ಸೂಚನೆ ನೀಡಲು ಮುಂದಿರಬೇಕು, ಸರ್ಕಾರಕ್ಕಿಂತ ಅರಣ್ಯ ಇಲಾಖೆ ದೊಡ್ಡದು ಅಲ್ಲ ಎನ್ನುವ ಭರವಸೆ ಸರ್ಕಾರ ನೀಡಿದ್ದಲ್ಲಿ ಮಾತ್ರವೇ ಉದ್ದೇಶಿತ ಯೋಜನೆ ಫಲಪ್ರದ ವಾಗಲು ಸಾಧ್ಯ ಎಂದು ನನ್ನ ಸಲಹೆ ನಾನು ಹೇಳಿದೆ.ಹರೀಶ್ ಕೆ.ಸಿ ಪೆರಾಜೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top