ಅರಂತೋಡು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ವಲಯಾರಣ್ಯಾಧಿಕಾರಿಗಳಿಗೆ ವಾರ್ಡಿನಲ್ಲಿ ಆಗುತ್ತಿರುವ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಕುರಿತು ಮನವಿ ಪತ್ರ ನೀಡಲಾಯಿತು.
ಮನವಿ ಸ್ವೀಕರಿಸಿದ ವಲಯಾರಣ್ಯಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು..ಅಗತ್ಯವಿದ್ದ ಕಡೆ ಆನೆ ಕಂದಕ, ಸೋಲಾರ್ ಬೇಲಿ , ಸೋಲಾರ್ ದೀಪ ಹಾಗೂ ಸೂಚನಾ ಫಲಕ ಆಳವಡಿಸುವುದಾಗಿ ತಿಳಿಸಿದರು. ಈಗಾಗಲೇ ಸುಮಾರು 25 ಬೀದಿ ದೀಪಗಳು , 15 ಕಿ.ಮೀ ರಸ್ತೆ ಬದಿ ಕಾಡು ಕಡೆಯುವುದಕ್ಕೆ ಅನುಮತಿಗಾಗಿ ಕೇಳಲಾಗಿದ್ದು ಅದನ್ನು ಮಾಡುವ ಸಂದರ್ಭದಲ್ಲಿ ನಮ್ಮ ವಾರ್ಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ, ಉಪಾಧ್ಯಕ್ಷರಾದ ವಿನಯ್ ಕುಮಾರ್ ಬೆದ್ರುಪಣೆ, ಕಾರ್ಯದರ್ಶಿ ರಂಜಿತ್ ಅಡ್ತಲೆ ಹಾಗೂ ನಿರ್ದೇಶಕರಾದ ಶ್ರೀ ಮೋಹನ ಪಂಜದಬೈಲು ಹಾಜರಿದ್ದರು.
ಕಾಡು ಪ್ರಾಣಿಗಳ ಹಾವಳಿ ತಡೆಯಲು ಮನವಿ

















