ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆ.14ರಂದು ನಡೆಯಿತು.
ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಮಟ್ಟದ ಎಲ್ಲಾ ಸಂಘಟನೆ ದಾರ್ಮಿಕ ಮುಖಂಡರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಕರು ಯುವಕ ಮಂಡಲ ಸಂಜೀವಿನಿ ಯೋಜನೆ ಒಕ್ಕೂಟ ಆಟೋ ಚಾಲಕ ಮಾಲಕರು, ಲಯನ್ಸ್ ಕ್ಲಬ್ ಊರ ನಾಗರಿಕರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಠಾರ, ರಿಕ್ಷಾ ಪಾರ್ಕ್, ಸರಕಾರಿ ಕಟ್ಟಡ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಕೀ. ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕಲ್ಲುಗುಂಡಿ ಪೇಟೆಯಿಂದ ಗೂನಡ್ಕ ಪೇಟೆ ತನಕ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಸ್ವಚ್ಚತಾ ಬಗ್ಗೆ ಪ್ರತಿಜ್ಚ ವಿಧಿ ಬೋದಿಸಿದರು . ಪಂಚಾಯತ್ ಅಧ್ಯಕ್ಷ ರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ಪೇರಡ್ಕ ಜುಮ್ಮಾ ಮಸೀದಿ ಖತೀಬ್ ಉಸ್ತಾದ್ ನಹೀಮ್ ಫೈಝಿ, ಕಲ್ಲುಗುಂಡಿ ಜುಮ್ಮಾ ಮಸೀದಿ ಖತೀಬ್ ಉಸ್ತಾದ್. ನಾಸಿರ್ ದಾರಿಮಿ ನಿವೃತ ಸೈನಿಕರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ಕೆ. ಪಿ. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ . ಎಂ. ಶಾಹಿದ್ , ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಕಿಶೋರ್ ಕುಮಾರ್ ಸ್ವಚ್ಛತೆ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು
ಗ್ರಾಮ ಪಂಚಾಯತ್ ಸದಸ್ಯರು ಸೊಸೈಟಿ ನಿರ್ದೇಶಕರಾದ ಜಿ ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ. ಹನೀಫ್ ವಂದಿಸಿದರು ಈ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಸಂಪಾಜೆ ಗ್ರಾಮದ ಸರ್ವ ನಾಗರಿಕರು ಜನ ಪ್ರತಿನಿಧಿಗಳು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧಿಕಾರಿಗಳು ನಿವೃತ ಸೈನಿಕರು, ದಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಯುವಕ ಮಂಡಲ, ಸಂಜೀವಿನಿ ಒಕ್ಕೂಟ, ಲಯನ್ಸ್ ಕ್ಲಬ್.ಸಹಕಾರಿ ಸಂಘದ ಸದಸ್ಯರು ಗಳು ವಾಹನ ಚಾಲಕ ಮಾಲಕರು ಬಾಗವಹಿಸಿ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಸೆಳೆದರು.
ಸಂಪಾಜೆ : ಸ್ವಚ್ಚತಾ ಕಾರ್ಯಕ್ರಮ

















