ಸ್ಪಂದನ ಗೆಳೆಯರ ಬಳಗ(ರಿ) ಅಡ್ತಲೆ ಇವರ ಆಶ್ರಯದಲ್ಲಿ ಆ.17ರಂದು 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆಯು ನಡೆಯಿತು. ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಅಡ್ತಲೆ- ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ಸ್ಥಾನದ ಅಧ್ಯಕ್ಷರಾದ ಶ್ರೀ ಸದಾನಂದ ಅಡ್ತಲೆ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳು ನಡೆದವು.ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ವಿನಯ್ ಬೆದ್ರುಪಣೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ, ಸದಸ್ಯರಾದ ಶ್ರೀಮತಿ ಸುಜಯಾ ಲೋಹಿತ್ ಮೇಲಡ್ತಲೆ, ಅಡ್ತಲೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಮುಕುಂದ ಡಿ. , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಭವಾನಿಶಂಕರ ಅಡ್ತಲೆ, ಮಾಜಿ ಸೈನಿಕರಾದ ಶ್ರೀ ಮಹೇಶ್ ದೀಟಿಗೆ, ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀ ಶಶಿಕುಮಾರ್ ಉಳುವಾರು, ಅಡ್ತಲೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಹಿತ್ ಮೇಲಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಅಡ್ತಲೆ, ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ದಿನೇಶ್ ಅರಮನೆಗಯ ಇವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಶ್ರೀ ಪವನ್ ಪಿಂಡಿಮನೆ , ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯನ್ನು ಮಾಡಿರುವ ಕು.ದೀಪ್ತಿ ಕೆ.ಸಿ., ಶೈಕ್ಷಣಿಕ ಸಾಧನೆಯನ್ನು ಮಾಡಿರುವ ಕು.ಜ್ಯೋತಿ ಬೆದ್ರುಪಣೆ , ಸಾಮಾಜಿಕ ಸೇವೆಗೆ ಶ್ರೀ ಲಿಂಗರಾಜ್ ಮೇಲಡ್ತಲೆ , ಶೈಕ್ಷಣಿಕ , ಸಾಂಸ್ಕೃತಿಕ ಹಾಗೂ ಕಲಾ ಸಾಧಕಿ ಕು.ಉಜನಾ ಕಾಯರ , ಸಾಮಾಜಿಕ ಹಿರಿಯ ಸಾಧಕಿ ಶ್ರೀಮತಿ ಜಾನಕಿ ಅಡ್ತಲೆ ಮುಂತಾದ ಊರಿನ ಆರು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಶ್ರೀ ರತನ್ ಕಿರ್ಲಾಯ ಇವರು ಸ್ವಾಗತಿಸಿ ಶ್ರೀ ಕಿಶೋರ್ ಅಡ್ಕ ಇವರು ಧನ್ಯವಾದಗೈದರು.ಶ್ರೀ ರಂಜಿತ್ ಅಡ್ತಲೆ ಕಾರ್ಯಕ್ರಮವನ್ನು ನಿರೂಪಿಸಿದರು.
ಅಡ್ತಲೆ : ಸ್ಪಂದನ ಗೆಳೆಯರ ಬಳಗದ ವತಿಯಿಂದ ವಿಜೃಂಭಣೆಯಿಂದ ನಡೆದ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆ

















