ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತ್ರ್ ಶಕ್ತಿ ದುರ್ಗಾವಾಹಿನಿ ಹನುಮಾನ್ ಶಾಖೆ ಆರಂತೋಡು ಸುಳ್ಯ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ
ಪ್ರತಿ ವರ್ಷದಂತೆ ಅಖಂಡ ಸಂಕಲ್ಪ ಯಾತ್ರೆಯ ಮೆರವಣಿಗೆ ಕೋಡಂಕೇರಿಯಿಂದ ದುರ್ಗಾಮತಾ ಭಜನಾ ಮಂದಿರದ ಎದುರುಗಡೆ ಸಂಪನ್ನ ಗೊಂಡು ಸಿರಿಸೌಧ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರಾದ ಪದ್ಮನಾಭ ಯು ಎಸ್ ವಹಿಸಿದರು ಧಾರ್ಮಿಕ ಉಪನ್ಯಾಸವನ್ನು ಸಂದೀಪ್ ಒಳಳಂಬೆ ವಿ ಹೆಚ್ ಪಿ ನ ವಿಧಿ ಪ್ರಮುಖ್ ಸುಳ್ಯ ಪ್ರಖಂಡ ಇವರು ಸ್ವಾತಂತ್ರ ಪಡೆದ ನಂತರ ನಮ್ಮ ದೇಶ ಯಾವ ರೀತಿಯಲ್ಲಿ ಬೆಳವಣಿಗೆ ಯನ್ನು ಕಂಡಿದೆ ಇದರ ಬಗ್ಗೆ ಉಪನ್ಯಾಸ ಮಾಡಿದರು ಸುಳ್ಯ ಪ್ರಖಂಡ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಲ್ಕರ್ ಹಿಂದೂ ಸಮಾಜ ಇನ್ನೂ ಕೂಡ ಒಂದೇ ಮುಖವಾಗಿ ನಡೆಯದೆ ಬೇರೆ ಬೇರೆ ಗುಂಪು ಗಳಾಗಿ ಸಾಗುತ್ತಿದ್ದು ದುರದೃಷ್ಟಕರ ಎಂದು ತಿಳಿಸಿದರು ಹಾಗೂ ಹನುಮಾನ್ ಶಾಖೆಯ ಅಧ್ಯಕ್ಷರಾದ ವಿನೋದ್ ಉಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಅಲ್ಲದೆ ಪರಿವಾರ ಸಂಘಟನೆಯ ಪ್ರಮುಖರು ಹಾಗೂ ಹನುಮಾನ್ ಶಾಖೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಪುಷ್ಪಾಮೇದಪ್ಪ, ಸ್ವಾಗತ ರೀನಾ ಚಂದ್ರಶೇಖರ, ಪ್ರತಿಜ್ಞಾ ವಿಧಿ ಬೋಧನೆ ಚೇತನ್ ಕೊಡಂಕೇರಿ, ಧನ್ಯವಾದವನ್ನು ಸೋಮಶೇಖರ್ ಪೈಕ ಹಾಗೂ ನಿರೂಪಣೆ ದೀಪ್ತಿ ಪೈಕ ಮಾಡಿದರು.



































