ಆ 24:ಸುಳ್ಯದಲ್ಲಿ ಭೀಮರಾವ್ ವಾಷ್ಕರ್ ಉತ್ಸವ ,ಸನ್ಮಾನ,ಕವಿಗೋಷ್ಠಿ,ಸಂಗೀತ ರಸಮಂಜರಿ ಕಾರ್ಯಕ್ರಮ

ಕವಿ, ಕಥೆಗಾರ, ಗಾಯಕ,ಜ್ಯೋತಿಷಿ, ನಟ – ನಿರ್ದೇಶಕ
ಹೆಚ್ . ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ವತಿಯಿಂದ ಭೀಮರಾವ್ ವಾಷ್ಕರ್ ಉತ್ಸವ ಭಾನುವಾರ ಆಗಸ್ಟ್ 24ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಲಾಗುವುದು.
ಉತ್ಸವವನ್ನು ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಸಂಚಾಲಕರು, ಚೈತನ್ಯ ಸೇವಾಶ್ರಮ, ಅಜ್ಜಾವರ ದೇವರಕಳಿಯ, ಸುಳ್ಯ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸನ್ಮಾನಿತರ ಪರವಾಗಿ ನಾರಾಯಣ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಲಿದ್ದಾರೆ.ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷ ಇಕ್ಬಾಲ್ ಬಾಳಿಲ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹೃದಯದ ಮಾತು ಕಾರ್ಯಕ್ರಮದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಷ ಹಾಗೂ ಸಂಜೆವಾಹಿನಿ ಪತ್ರಿಕೆಯ ಪ್ರಧಾನ ಸಂಪಾದಕ ಅಣ್ಣಪ್ಪ ಮೇಟಗೌಡ
ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ವೈಲೇಶ್ ಪಿ.ಎಸ್. ಕೊಡಗು ಹಿರಿಯ ಸಾಹಿತಿ, , ಹಾ.ಮ. ಪೇರಾಲು ಸತೀಶ್ ಹಿರಿಯ ಸಾಹಿತಿ, ಬೆಂಗಳೂರು, ಚಂದ್ರಶೇಖರ ಪೇರಾಲ್ ಅಧ್ಯಕ್ಷ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸುಳ್ಯ, ಮೋಹನ ನಂಗಾರು ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳು, ಸಂಧ್ಯಾ ಕುಮಾರಿ ಉಬರಡ್ಕ ಖ್ಯಾತ ಕವಯಿತ್ರಿ, ಸುಳ್ಯ, ಅನಾರ್ಕಲಿ ಸಲೀಂ ಖ್ಯಾತ ಸಾಹಿತಿ, ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಾರ್ಥನೆ ಪುಷ್ಪಾವತಿ ಡಿ. ಮಾಡುವರು. ಸ್ವಾಗತವನ್ನು ಸಾವಿತ್ರಿ ದೊಡ್ಡಮನೆ ಐವರ್ನಾಡು ಸಲ್ಲಿಸಲಿದ್ದಾರೆ. ಸನ್ಮಾನ ಪತ್ರವನ್ನು ಪ್ರಮೀಳಾ ರಾಜ್ ಐವರ್ನಾಡು ವಾಚಿಸಲಿದ್ದಾರೆ. ವಂದನಾರ್ಪಣೆಯನ್ನು ಪೂರ್ಣಿಮಾ ಪರ್ಲಂಪಾಡಿ ಮಾಡುವರು. ಕಾರ್ಯಕ್ರಮವನ್ನು ಅನುರಾಧ ಶಿವಪ್ರಕಾಶ್, ಸುಳ್ಯ ನಿರೂಪಿಸಲಿದ್ದಾರೆ. ಚುಟುಕು ಕವಿಗೋಷ್ಠಿಗೆ ರತ್ನಾ ಕೆ. ಭಟ್ ಹಿರಿಯ ಕವಯಿತ್ರಿ, ಪುತ್ತೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ವಾಗತವನ್ನು ಸುಮಂಗಲ ಲಕ್ಷ್ಮಣ್ ಕಾರ್ಯದರ್ಶಿ, ಚಂದನ ಸಾಹಿತ್ಯ ವೇದಿಕೆ, ಸುಳ್ಯ ನೀಡಲಿದ್ದಾರೆ. ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ವಿಜಯಕುಮಾರ್ ಕಾಣಿಚ್ಛಾರ್ ನಿರೂಪಿಸಲಿದ್ದಾರೆ. ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಲಕ್ಷ್ಮಣ್ ಪೆರುಮಾಳ್ ಗಾಯಕ, ಸಂಘಟಕ, ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜೇಶ್ ಎಸ್.ಎನ್. ಗಾಯಕ, ಸುಳ್ಯ ಮುಖ್ಯ ಅತಿಥಿಯಾಗಲಿದ್ದಾರೆ. ಸ್ವಾಗತವನ್ನು ಅರುಣ್ ರಾವ್ ಜಾಧವ್ ಸಲ್ಲಿಸಲಿದ್ದಾರೆ. ಧನ್ಯವಾದವನ್ನು ಗೌರಿತಾ ಕೆ.ಜೆ. ಸುಬ್ರಹ್ಮಣ್ಯ ಮಾಡುವರು. ಸುಳ್ಯದಲ್ಲಿ ನಡೆಯಲಿರುವ ಈ ಭೀಮರಾವ್ ವಾಪ್ಟರ್ ಉತ್ಸವ ಸಾಹಿತ್ಯ-ಸಂಗೀತದ ಸಾನ್ನಿಧ್ಯದಲ್ಲಿ ಜರುಗಲಿದ್ದು, ಗಾಯಕರು ಹಾಗೂ ಸಾಹಿತ್ಯಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top