ಅರಂಬೂರು : ಯುವಕನ‌ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆ.20ರ ರಾತ್ರಿ ವರದಿಯಾಗಿದೆ.ಯುವಕರ ತಂಡವೊಂದು ತಲ್ವಾರಿನಿಂದ ಪುನೀತ್ ಎಂಬ ಯುವಕನ ಮೇಲೆ ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಅರಂಬೂರಿನ ಸರಳಿಕುಂಜ ನಿವಾಸಿ ವಿಠಲ ರವರ ಮಗ ಪುನೀತ್ ಹಲ್ಲೆಗೊಳಗಾದ ಯುವಕ.
ರಾತ್ರಿ ಗಂಟೆ 9.30 ರ ವೇಳೆಗೆ ಆರಂಬೂರಿನಲ್ಲಿರುವ ಮನೆಗೆ ನಾಲ್ವರು ಯುವಕರು ಬೈಕಿನಲ್ಲಿ ಏಕಾಏಕಿಯಾಗಿ ಬಂದು ತಲ್ವಾರಿನಿಂದ ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ತಲೆಯ ಭಾಗಕ್ಕೆ ಏಟಾಗಿದ್ದು ಪುನೀತ್ ರವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಮನೋಜ್, ಚೈತ್ರೆಶ್, ಶ್ರೀಜಿತ್‌ ಉಪ್ಪಳ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.. ಓರ್ವ ಆರೋಪಿಯ
ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top