ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ. ಸ್ವಾಗತಿಸಿ ವರದಿ ವಾಚಿಸಿದರು ಕಾರ್ಯದರ್ಶಿ ಸುಂದರ ಸಾರ್ವಜನಿಕರ ಅರ್ಜಿ ಓದಿದರು
ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಇಂಜಿನಿಯರ್ ಕೊರತೆ ಇದ್ದುಪಂಚಾಯತ್ ಕೆಲಸಗಳು ವಿಳಂಬ ಆಗುತ್ತಿದೆ. ಶೀಘ್ರ ಸರ್ಕಾರ ಇಂಜಿನಿಯರ್ ನೇಮಕ ಮಾಡಬೇಕು ಈ ಬಗ್ಗೆ ಸಂಬಂಧ ಪಟ್ಟವರಿಗೆ ಮನವಿ ಕೊಡಲು ನಿರ್ಣಯಿಸಲಾಯಿತು
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ರಸ್ತೆ ಚರಂಡಿ ಕಾಮಗಾರಿ ಮಾಡಲು ತೀರ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀದಿ ದೀಪಗಳ ದುರಸ್ತಿ ಮಾಡಲು ತೀರ್ಮಾನಿಸಲಾಯಿತು
ಸರಕಾರದ ನಿರ್ದೇಶನ ಪ್ರಕಾರ ಸ್ವಚ್ಛತಾ ಕಾರ್ಯಕ್ರಮ ಸಂಜೀವಿನಿ ಒಕ್ಕೂಟದ ಮೂಲಕ ಮಾಡಬೇಕಾಗಿದ್ದು ಸರಕಾರದ ಆದೇಶ ಪ್ರಕಾರ ಬರುವ ಸೆಪ್ಟೆಂಬರ್ ತಿಂಗಳಲ್ಲಿ 1 ನೇ ತಾರೀಕು ಸಂಜೀವಿನಿ ಒಕ್ಕೂಟದ ಮೂಲಕ ಸ್ವಚ್ಛತೆ ಮಾಡಲು ತೀರ್ಮಾನಿಸಲಾಯಿತು ಹಾಗೂ ಆಗಸ್ಟ್ 30 ಶನಿವಾರ 3 ಗಂಟೆಗೆ ಪಂಚಾಯತ್ ಸಭಾ ಭವನದಲ್ಲಿ ವರ್ತಕರ ಸಂಘದ ಸಭೆ ಕರೆಯಲು ತೀರ್ಮಾನಿಸಲಾಯಿತು
ರಾಜರಾಂಪುರ ಶಾಲಾ ಆವರಣ, ಆಲಿ ಗುಡ್ಡೆ ರಸ್ತೆ ಕಾಂಕ್ರಿಟ್, ಮೂಲೆ ದರ್ಕಾಸ್ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಲು ತೀರ್ಮಾನಿಸಲಾಯಿತು
ಪ್ಲಾಸ್ಟಿಕ್ ವಸ್ತುಗಳನ್ನು ಸಾಧ್ಯ ಆದಷ್ಟು ಕಡಿಮೆ ಮಾಡುವುದು. ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಸಾರ್ವಜನಿಕರೇ ತಿಳುವಳಿಕೆ ನೀಡುವುದು.
ಶಾಲಾ ಪರಿಸರದಲ್ಲಿ ಗುಟ್ಕಾ ಮಾರಾಟ ಮಾಡುವುದು ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಶ್ಮಲ ವಸ್ತುಗಳನ್ನು ಎಸೆಯುವುದು ಅಪರಾಧವಾಗಿದ್ದು ದಂಡನೆ ಜಾರಿಯಲ್ಲಿದ್ದು. ದಂಡನೆ ವಿಧಿಸಿ ಕ್ರಮ ಕೈಗೊಳ್ಳುವುದು.
ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಗಳಾದ ಜಗದೀಶ್ ರೈ, ಜಿ ಕೆ ಹಮೀದ್ ಗೂನಡ್ಕ, ಸೋಮಶೇಖರ್, ಸುಂದರಿ, ಸದಸ್ಯರುಗಳಾದ ವಿಮಲಾ ಪ್ರಸಾದ್ ಲಿಸ್ಡಿ ಮೊನಾಲಿಸಾ ಅನುಪಮ ,ಸುಶೀಲ, ಸೌವಾದ್, ರಜನಿ ಶರತ್, ವಿಜಯ ಉಪಸ್ತಿತರಿದ್ದರು
ಸಂಪಾಜೆ : ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

















