ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ತಾಲೂಕು 2025-26 ನೇ ಸಾಲಿನ ಆತ್ಮ ಯೋಜನೆಯಡಿ ರೈತರ ಪ್ರಥಮ ದಿನದ ತರಬೇತಿಯು ಇಂದು ನಡೆಯಿತು. ಉಜಿರೆಯ ಶ್ರೀ ಸುಲೈಮಾನ್ ಇವರು ಅಣಬೆ ಕೃಷಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಅವರು ಇಲಾಖೆ ಹಾಗೂ ರೈತರ ನಡುವಿನ ಸಂಪರ್ಕ ಕೊಂಡಿಯಾಗಿ ಕೃಷಿ ಸಖಿಯರು ಕೆಲಸ ನಿರ್ವಹಿಸುತ್ತಿದ್ದು, ಈ ತರಬೇತಿಯನ್ನು ಪಡೆದುಕೊಂಡಲ್ಲಿ ರೈತರಿಗೆ ಮಾಹಿತಿ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು. NRLM ಸಂಜೀವಿನಿ ಸುಳ್ಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾರವರು ಸಂಜೀವಿನಿ ಬಗ್ಗೆ ಹಾಗೂ ಕೃಷಿ ಸಖಿಯರು ಇಲಾಖೆಯ ಪರವಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಪಡೆದುಕೊಳ್ಳುವ ತರಬೇತಿಯನ್ನು ರೈತರಿಗೆ ತಿಳಿಸುವಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು. ರೈತರು,ಪಂಜ ಹೋಬಳಿ ಹಾಗೂ ಸುಳ್ಯ ತಾಲೂಕಿನ ಕೃಷಿ ಸಖಿಯರು ತರಬೇತಿಯನ್ನು ಪಡೆದುಕೊಂಡರು. ಸ್ವಾಗತ ಹಾಗೂ ಧನ್ಯವಾದವನ್ನು ಬಿ. ಟಿ. ಎಂ ನಂದಿತಾರವರು ಮಾಡಿದರು. ಕೃಷಿ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸುಳ್ಯ : ಆತ್ಮ ಯೋಜನೆಯಡಿ ಕೃಷಿ ಸಖಿಯರಿಗೆ ತರಬೇತಿ

















