ಅರಂತೋಡು ಗ್ರಾಮದ ಅಡ್ತಲೆಯಲ್ಲಿ ಗುರುವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದ ಘಟನೆ ವರದಿಯಾಗಿದೆ.
ಗಣೇಶ್ ಮಾಸ್ತರ್ ಅಡ್ತಲೆ
ಪ್ರದೀಪ್ ಅಡ್ತಲೆ, ಪ್ರಭಾಕರ ಅಡ್ತಲೆ ಗಿರೀಶ್ ಅಡ್ತಲೆ, ಅವರ ತೋಟಗಳಿಗೆ ದಾಳಿ ನಡೆಸಿದ ಕಾಡಾನೆಗಳು ಅಡಿಕೆ,ತೆಂಗು ಬಾ ಬಾಳೆ ಇತರ ಬೆಳೆಗಳನ್ನು ನಾಶಪಡಿಸಿವೆ.ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಇತ್ತೀಚೆಗೆ ಈ ಭಾಗದಲ್ಲಿ ಅತೀ ಹೆಚ್ಚು ಕಾಡು ಪ್ರಾಣಿಗಳ ಉಪಟಳ ಹೆಚ್ಚಿದ್ದು, ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಈ ಊರಿನ ಜನರ ಪರವಾಗಿ ನಾಗರಿಕ ಹಿತರಕ್ಷಣ ವೇದಿಕೆ ಇತ್ತೀಚೆಗೆ ಮನವಿ ಮಾಡಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು, ಶಾಶ್ವತ ತಡೆ ಬೇಲಿ ನಿರ್ಮಾಣ ಮಾಡುವತ್ತ ಸರಕಾರದ ಗಮನ ಸೆಳೆದು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಊರಿನ ನಾಗರಿಕರು ಒತ್ತಾಯಿಸಿದ್ದಾರೆ
ಅಡ್ತಲೆ : ಕಾಡಾನೆಗಳಿಂದ ಅಪಾರ ಪ್ರಮಾಣದ ಬೆಳೆ ನಾಶ

















