ಆತ್ಮಯೋಜನೆಯ ರೈತ ತರಬೇತಿ ಸಮಾರೋಪ

ಕರ್ನಾಟಕ ಸರ್ಕಾರ ದ.ಕ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸುಳ್ಯ ತಾಲೂಕು 2025-26ನೆಯ ಸಾಲಿನ ಆತ್ಮ ಯೋಜನೆಯಡಿ ಜಿಲ್ಲೆಯೊಳಗಿನ 3ನೆಯ ದಿನದ ರೈತರ ತರಬೇತಿಯು ಇಂದು ನಡೆಯಿತು. ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಗುರುಪ್ರಸಾದ್, ಶ್ರೀ ಚನಿಯ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು, ಎನ್ ಆರ್ ಎಲ್ ಎಂ ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ, ಬಿಟಿಎಂ ಶ್ರೀಮತಿ ನಂದಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಮನೋಜ್ ನರಿಯೂರು ಕೃಷಿಕರು, ಉದ್ಯಮಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.
ಕೃಷಿಕರಾದ ಶ್ರೀ ಭಾಸ್ಕರ ರಾವ್ ಇವರು ಸಾವಯವ ಕೃಷಿ, ಎರೆಹುಳ ಗೊಬ್ಬರ ತಯಾರಿ, ಹೈನುಗಾರಿಕೆ, ಸಮಗ್ರ ಕೃಷಿ, ಹಲಸಿನ ಹಣ್ಣು ಮತ್ತು ಬೀಜದಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕರು, ಕೃಷಿ ಸಖಿಯರು ತರಬೇತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕೃಷಿಕರು, ಕೃಷಿ ಸಖಿಯರು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮೂರು ದಿನಗಳ ಆತ್ಮ ಯೋಜನೆ ತರಬೇತಿಯು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top