ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಕೆಲಸಕ್ಕೆ ಕೂಲಿ ಕಾರ್ಮಿಕ ಬರಲಿಲ್ಲ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಅಚ್ಚರಿಯ ಘಟನೆಯೊಂದು ನಡೆದಿದೆ. ಕುಪ್ಪೆಪದವು ಸಮೀಪದ ಅಡಿಕೆ ಬೆಳೆಗಾರರೊಬ್ಬರು ಅಡಿಕೆಗೆ ಔಷಧಿ ಸಿಂಪಡಣೆ ಮಾಡುವ ಕೆಲಸಗಾರನೋಬ್ಬರಿಗೆ ತನ್ನ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸಿ ಕೊಡುವಂತೆ ಕೇಳಿದ್ದರು. ಆದರೆ ಕೆಲಸಗಾರ ಕೆಲಸಕ್ಕೆ ಬಾರದೆ ಇದ್ದುದರಿಂದ ಸಿಟ್ಡುಗೊಂಡ ಅಡಿಕೆ ಬೆಳೆಗಾರ ನೇರವಾಗಿ ಬಜಪೆ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಲ್ಲಿ ಮೌಖಿಕವಾಗಿ ದೂರಿಕೊಂಡಿದ್ದಾರೆ. ಅವರ ದೂರನ್ನು ಆಲಿಸಿದ ಪೊಲೀಸರು ಈ ದೂರನ್ನು ಯಾವ ಸೆಕ್ಷನ್ ಅಡಿಯಲ್ಲಿ ದಾಖಲಿಸಿಕೊಳ್ಳುವುದೆಂದು ಗೊಂದಲಕ್ಕೀಡಾಗಿ ಇದ್ದ ಸೆಕ್ಷನ್ ಗಳನ್ನೆಲ್ಲಾ ಒಮ್ಮೆ ತಿರುವಿ ಹಾಕಿ ನೋಡಿದರೂ ಸಾಧ್ಯವಾಗದೆ ಕೇಸು ಇತ್ಯರ್ಥ ಮಾಡುವುದು ಹೇಗೆಂದು ತಲೆ ಬಿಸಿ ಒಂದು ಸಲ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡಿ ಮೂಲಗಳಿಂದ ತಿಳಿದುಬಂದಿದೆ.
ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ಬಾರದ ಕೂಲಿಕಾರ್ಮಿಕ : ಪೊಲೀಸ್ ದೂರು ನೀಡಿದ ರೈತ

















