ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೊಡಿ ಅವರ ತಂದೆ ಸುಳ್ಯ ಪೈಚಾರ್ ಆರ್ತಾಜೆ ನಿವಾಸಿ ಉಮೇಶ್ ಗೌಡರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ಮರದಿಂದ ಬಿದ್ದು ಜಖಂಗೊಂಡು ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು.
ಮರದಿಂದ ಬಿದ್ದು ಗಂಭೀರ ಗಾಯಗೊಂಡ ಉಮೇಶ್ ರವರನ್ನು ಚಿಕಿತ್ಸೆಗೆಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಮರದಿಂದ ಬಿದ್ದು ವ್ಯಕ್ತಿ ಸಾವು

















