ಅನ್ನ ದಾನ ವಸ್ತ್ರ ಮಾಡುವ ಧರ್ಮಸ್ಥಳ ಶ್ರೀ ಕ್ಷೇತ್ರದ ಅವಹೇಳನ ಸಹಿಸಲು ಅಸಾಧ್ಯ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಧಿಗಳ ಬಳಗ ಸುಳ್ಯ,ಧರ್ಮ ಜಾಗೃತಿ ಸಮಾವೇಶ ಸಮಿತಿ ಇದರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಸುಳ್ಯದ ಜಾನಕಿ ವೆಂಕಟರಮಣ ಸಭಾಭವನದಲ್ಲಿ ಸೆ.8ರಂದು ನಡೆದ ಧರ್ಮ ಜಾಗೃತಿಗಾಗಿ ಹಕ್ಕೋತ್ತಾಯ ಸಭೆಯಲ್ಲಿ ಅವರು ಮಾತನಾಡಿದರು. ಅನ್ನದಾನ ಮೊದಲು ಪ್ರಾರಂಭವಾದುದು ಶ್ರೀ ಕ್ಷೇತ್ರದಲ್ಲಿ ಇಂತಹ ಕ್ಷೇತ್ರದ ಬಗ್ಗೆ ಅವಹೇಳವಾದಗ ನಾವು ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಬಳಗದ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಯಾರದೋ ಅವಹೇಳನಕಾರಿ ಮಾತಿಗೆ ನಾವು ಬಲಿಯಾಗಿ, ನಾವು ನಮ್ಮ ಸನಾತನ ಧರ್ಮದ ಕೇಂದ್ರಗಳ ಮೇಲೆ ಅಪನಂಬಿಕೆ ಇಟ್ಟುಕೊಳ್ಳಬೇಡಿ. ಶ್ರದ್ಧಾ ಕೇಂದ್ರಗಳನ್ನು ಸ್ಥಾಪನೆ ಮಾಡಲು ಅದೆಷ್ಟೋ ಹಿರಿಯರು ಅನೇಕ ವರ್ಷ ಪರಿಶ್ರಮ ಪಟ್ಟಿದ್ದಾರೆ. ಅದನ್ನು ಸಮಾಜಮುಖಿ, ಧಾರ್ಮಿಕಮುಖಿಯಾಗಿ ನಡೆಸಲು ಅದರ ನೇತಾರರು ತುಂಬಾ ಶ್ರಮ ಪಟ್ಟಿದ್ದಾರೆ. ಕ್ಷೇತ್ರದ ಮೇಲಿನ ಲಕ್ಷಾಂತರ ಮಂದಿಯ ನಂಬಿಕೆಯ ವಿಶ್ವಾಸವನ್ನು ಕ್ಷಣ ಮಾತ್ರದಲ್ಲಿ ಬೀಳಿಸುವ ಪ್ರಯತ್ನಗಳು ನಡೆಯಬಾರದು, ಅದಕ್ಕೆ ನಾವು ಬಲಿಯಾಗಬಾರದು ಎಂದು ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಜೆಡಿಎಸ್ ಮುಖಂಡ ಎಂ.ಬಿ ಸದಾಶಿವರು ಪ್ರಮುಖ ಭಾಷಣ ಮಾಡಿ ಧರ್ಮಸ್ಥಳದ ಧರ್ಮಧಿಕಾರಿಗಳ ಮತ್ತು ಕ್ಷೇತ್ರದ ಬಗ್ಗೆ ಅನೇಕ ಕಥೆ ಕಟ್ಟುವ ಮೂಲಕ ಅಪಪ್ರಚಾರ ಮಾಡಲಾಗುತ್ತಿದ್ದು ಇದನ್ನು ನಾವು ಒಗ್ಗಟಾಗಿ ಖಂಡಿಸಬೇಕು.ಶಾಸಕರ ಭವನಕ್ಕೆ ಬಾಂಬು ಇಟ್ಟವರ ನೇತೃತ್ವದಲ್ಲಿ ಧರ್ಮಸ್ಥಳ ದಲ್ಲಿ ಹೋರಟ ನಡೆಯುತ್ತಿದೆ.ಅವರು ಕೆಲವರಿಗೆ ನಾಯಕರು ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ವಿಷಯ ಬೇರೆ ಉಂಟಾ ಎಂದು ಅವರು ಪ್ರಶ್ನಿಸಿದರು.
ನ.ಪಂ.ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಪ್ರಮುಖರಾದ ಗಿರೀಶ್ ಭಾರದ್ವಾಜ್, ಕೃಷ್ಣ ಕಾಮತ್, ರಾಜೇಶ್ ಮೇನಾಲ, ಪಿ.ಕೆ.ಉಮೇಶ್, ವಿಷ್ಣುಕಿರಣ್, ಪಿ.ಸಿ.ಜಯರಾಮ, ಎಸ್.ಎನ್.ಮನ್ಮಥ, ಎಂ.ವೆAಕಪ್ಪ ಗೌಡ, ವೆಂಕಟ್ ವಳಲಂಬೆ, ಗಿರಿಧರ ಸ್ಕಂದ, ಡಾ.ಹರಪ್ರಸಾದ್ ತುದಿಯಡ್ಕ, ಲೋಕನಾಥ ಅಮೆಚೂರು, ನಾರಾಯಣ ಕೇಕಡ್ಕ, ದೀಪಕ್ ಕುತ್ತಮೊಟ್ಟೆ, ಕೇಶವ ಕೊಳಲುಮೂಲೆ, ಮಧುಸೂದನ್, ನಾಗಕುಮಾರ ಶೆಟ್ಟಿ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಮಲ್ಲೇಶ್ ಬೆಟ್ಟಂಪಾಡಿ, ಎ.ಕೆ.ಮಣಿಯಾಣಿ, ಐತ್ತಪ್ಪ ರೈ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಬಳಗದ ಪ್ರಧಾನ ಕರ‍್ಯದರ್ಶಿ ಅಶೋಕ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಾರಾಯಣ ಕೇಕಡ್ಕ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಅನ್ನ ದಾನ ವಸ್ತ್ರ ದಾನ ಮಾಡುವ ಧರ್ಮಸ್ಥಳ ಶ್ರೀ ಕ್ಷೇತ್ರದ ಅವಹೇಳನ ಸಹಿಸಲು ಅಸಾಧ್ಯ : ಶಾಸಕಿ ಭಾಗೀರಥಿ ಮುರುಳ್ಯ

















