Author name: Tejas

ಜೂ.3ರಂದು ಮುಖ್ಯಮಂತ್ರಿ ಯಾಗಿ ಡಿ.ಕೆ.ಶಿ ಪ್ರಮಾಣ. ವಚನ ಸ್ವೀಕಾರ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದು ನಿರ್ಧಾರವಾಗಿತ್ತು‌ಆದರೆ ಪ್ರಜಾಪ್ರಭುತ್ವದ ನಿಯಮದಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನೂತನ ಸಿಎಂ ಆಯ್ಕೆ ಅಧಿಕೃತವಾಗಿ ನಡೆದಿದೆ.ಜೂನ್ 3ರಂದು ಸಂಜೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ […]

ಜೂ.3ರಂದು ಮುಖ್ಯಮಂತ್ರಿ ಯಾಗಿ ಡಿ.ಕೆ.ಶಿ ಪ್ರಮಾಣ. ವಚನ ಸ್ವೀಕಾರ Read More »

ಜೂ.1 ರಂದು ಸ್ಟಾರ್ ಟೈಲ್ಸ್ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4 ನೆಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಶುಭಾರಂಭ ಗೊಳ್ಳಲಿದೆ.ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್‌ಗಳ ಅತ್ಯಪೂರ್ವ ಸಂಗ್ರಹದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಎಂ ಕೆ ರೆಸ್ಸಿಡೆನ್ಸಿ ಕಟ್ಟಡದಲ್ಲಿ ಸುಮಾರು 9000 ಚದರಡಿಯ, ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿರುವ,ನಗು ಮೊಗದ ಅನುಭವಿ ಸಿಬ್ಬಂದಿಗಳನ್ನು ಹೊಂದಿರುವಬ್ರಹತ್ ಟೈಲ್ಸ್ ಮಳಿಗೆಜೂ.1 ರ ಸಂಜೆ ಗಂಟೆ 4:00 ಕ್ಕೆ ಉದ್ಘಾಟನೆ ಗೊಳ್ಳಲಿದೆ

ಜೂ.1 ರಂದು ಸ್ಟಾರ್ ಟೈಲ್ಸ್ ಸುಳ್ಯದಲ್ಲಿ ಶುಭಾರಂಭ Read More »

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ

ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಪರಿವಾರ ಕಾನದಲ್ಲಿ ತ್ಯಾಜ್ಯ ಎಸೆದವರಿಗೆ ಗ್ರಾಮ ಪಂಚಾಯತಿ ವತಿಯಿಂದ 3000 ರೂಪಾಯಿ ದಂಡನೆ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ಪರಿಶೀಲಿಸಿದಾಗ ಲಭ್ಯವಾದ ವಿಳಾಸದಂತೆ ದಂಡಪಾವತಿಸುವಂತೆ ತಿಳಿಸಲಾಯಿತು. ಇದಕ್ಕೆ ಸಹಕರಿಸದಿದ್ದಾಗ ಸುಳ್ಳದ ಪೋಲೀಸ್ ಸಬ್ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ರವರ ಸಹಕಾರದೊಂದಿಗೆ ದಂಡನೆಯನ್ನು ವಿಧಿಸಲಾಗಿದೆ. ಮತ್ತು ಈ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ ಆರ್ ಅವರು ತಿಳಿಸಿದ್ದಾರೆ

ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಇಂದು ಬಲಿ ಒಳಗಾಗುವ (ಪತ್ತನಾಜೆ) ಕಾರ್ಯಕ್ರಮ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನದೇವಳದಲ್ಲಿ ಇಂದು (ಮೇ30)ರಂದುರಾತ್ರಿ ಗಂಟೆ 7.00ರಿಂದಬಲಿ ಒಳಗಾಗುವ (ಪತ್ತನಾಜೆ)ಕಾರ್ಯಕ್ರಮ ಜರುಗಲಿರುವುದು.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಇಂದು ಬಲಿ ಒಳಗಾಗುವ (ಪತ್ತನಾಜೆ) ಕಾರ್ಯಕ್ರಮ Read More »

ಕರ್ನಾಟಕದಲ್ಲಿ ಮತ್ತೆ ಮಳೆ!

ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ 3 ದಿನಗಳ ಕಾಲ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿಗೆ ಆರೆಂಜ್ ಅಲರ್ಟ್, ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ 30ರಂದು ದಕ್ಷಿಣ ಒಳನಾಡಿನಲ್ಲಿ ಅತ್ಯಂತ ಅಪಾಯಕಾರಿ ಹವಾಮಾನ ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮೇ 30ರಂದು ಆರೆಂಜ್ ಅಲರ್ಟ್ ಇದ್ದು, ತೀವ್ರ ಸಿಡಿಲು, ಬಿರುಗಾಳಿ ಅಪ್ಪಳಿಸುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಮತ್ತೆ ಮಳೆ! Read More »

ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು ಶಾರದಾ ಕಲಾಸಿರಿ – 2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ) ಪಂಜ, ಕೂತ್ಕುಂಜ ಗ್ರಾಮ ಇದರ ಆಶ್ರಯದಲ್ಲಿ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತುಶಾರದಾ ಕಲಾಸಿರಿ – 2026 ಪ್ರಶಸ್ತಿ ಪ್ರದಾನ ಇಂದು ಮೇ. 28 ರಂದು ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಿತು.ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರ ,ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಉದ್ಘಾಟಿಸಿ ಶುಭ ಹಾರೈಸಿದರು.ಪಂಜ

ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು ಶಾರದಾ ಕಲಾಸಿರಿ – 2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮ Read More »

ಬೆಳೆಯುತ್ತಿರುವ ಮಂಗಳೂರಿಗೆ ಸಿಟಿ ಬಸ್ ಮಾರ್ಗಗಳ ವಿಸ್ತರಣೆಗೆ ಸಂಸದ ಕ್ಯಾ. ಚೌಟ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ

ಮಂಗಳೂರು: ಮಂಗಳೂರು ನಗರದ ಕೆಲವು ಪ್ರಮುಖ ಸಿಟಿ ಬಸ್ ಮಾರ್ಗಗಳ ಬದಲಾವಣೆ ಮತ್ತು ವಿಸ್ತರಣೆಯ ಅಗತ್ಯತೆ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದಿರುವ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮುಂಬರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (RTA) ಸಭೆಯಲ್ಲಿ ತುರ್ತಾಗಿ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಿ ಅಪರ ಜಿಲ್ಲಾಧಿಕಾರಿಗಳು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದೆ. ಇದರೊಂದಿಗೆ, ಮಂಗಳೂರು ನಗರದ ಭೌಗೋಳಿಕ ಮತ್ತು ಜನಸಂಖ್ಯಾ

ಬೆಳೆಯುತ್ತಿರುವ ಮಂಗಳೂರಿಗೆ ಸಿಟಿ ಬಸ್ ಮಾರ್ಗಗಳ ವಿಸ್ತರಣೆಗೆ ಸಂಸದ ಕ್ಯಾ. ಚೌಟ ನೀಡಿದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ Read More »

ತೊಡಿಕಾನ : ಕಾಡಾನೆಗಳಿಂದ ಕೃಷಿ ನಾಶ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಅಪಾರ ಕೃಷಿ ನಾಶ ಮಾಡಿದ ಘಟನೆ ಮೇ.27ರಂದು ವರದಿಯಾಗಿದೆ.ಗ್ರಾಮದ ಕದಳಿವನ ಈಶ್ವರ ಭಟ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು 75 ಅಡಿಕೆ ಮರ 250 ಬಾಳೆ ಗಿಡಗಳನ್ನು ನಾಶ ಮಾಡಿವೆ ಎಂದು ಮನೆಯವರು ತಿಳಿಸಿದ್ದಾರೆ.

ತೊಡಿಕಾನ : ಕಾಡಾನೆಗಳಿಂದ ಕೃಷಿ ನಾಶ Read More »

ಪೇರಡ್ಕ ಗೂನಡ್ಕಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್‌ಹಾ ಆಚರಣೆ

ಸಂಪಾಜೆ:ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ ‘ಈದುಲ್ ಅಝ್‌ಹಾ’ (ಬಕ್ರೀದ್) ಹಬ್ಬವನ್ನು ಪೇರಡ್ಕ ಗೂನಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು. ಮಸೀದಿಯ ಗೌರವಾನ್ವಿತ ಖತೀಬರಾದ ಅಹ್ಮದ್ ನ‌ಈಂ ಮ‌ಅಬರಿ ಫೈಝಿ ಅವರ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬಳಿಕ ಈದ್ ಸಂದೇಶ ಭಾಷಣ ನೀಡಿದ ಅವರು, ಪ್ರವಾದಿ ಇಬ್ರಾಹೀಂ (ಅ) ಅವರ ನಿಷ್ಕಲ್ಮಶ ತ್ಯಾಗ ಮತ್ತು ದೇವರ ಮೇಲಿನ ದೃಢವಾದ ನಂಬಿಕೆಯನ್ನು ಸ್ಮರಿಸುತ್ತಾ, ಸಮಾಜದಲ್ಲಿ ಪ್ರತಿಯೊಬ್ಬರೂ

ಪೇರಡ್ಕ ಗೂನಡ್ಕಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಅಝ್‌ಹಾ ಆಚರಣೆ Read More »

ಇಂದು ಸಿಎಂ ರಾಜೀನಾಮೆ ಅನುಮಾನ!

ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಸದ್ಯಕ್ಕೆ ಅವರು ರಾಜೀನಾಮೆ ನೀಡುವುದಿಲ್ಲ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ರಾಜ್ಯಪಾಲರ ನಾಲ್ಕು ದಿನಗಳ ಗೈರುಹಾಜರಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದು ಸಿದ್ದರಾಮಯ್ಯ ತಂತ್ರವೇ ಎಂಬ ಚರ್ಚೆ ಜೋರಾಗಿದೆ. ಮತ್ತೊಂದೆಡೆ ಸತೀಶ್ ಜಾರಕಿಹೊಳಿ ನೇತೃತ್ವದ ಸಿದ್ದು ಬಣ 32 ಶಾಸಕರ ಸಹಿ ಸಂಗ್ರಹಿಸಿದೆ ಎನ್ನಲಾಗಿದ್ದು, ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಒಳಗೊಳಗೆ ವಿರೋಧ ವ್ಯಕ್ತವಾಗುತ್ತಿದೆ. ಎಂ.ಬಿ. ಪಾಟೀಲ್ ಕೂಡ “ಸಿಎಂ ರಾಜೀನಾಮೆ ಪ್ರಶ್ನೆಯೇ

ಇಂದು ಸಿಎಂ ರಾಜೀನಾಮೆ ಅನುಮಾನ! Read More »

error: Content is protected !!
Scroll to Top