ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು ಶಾರದಾ ಕಲಾಸಿರಿ – 2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ) ಪಂಜ, ಕೂತ್ಕುಂಜ ಗ್ರಾಮ ಇದರ ಆಶ್ರಯದಲ್ಲಿ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು
ಶಾರದಾ ಕಲಾಸಿರಿ – 2026 ಪ್ರಶಸ್ತಿ ಪ್ರದಾನ ಇಂದು ಮೇ. 28 ರಂದು ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಿತು.
ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರ ,ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಪುರುಷೋತ್ತಮ ಮಲ್ಕಜೆ ಉದ್ಘಾಟಿಸಿ ಶುಭ ಹಾರೈಸಿದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಪ್ರಶಸ್ತಿ ಪುರಸ್ಕರಿಸಿ ಮಾತನಾಡಿ “ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್‌ ನಿರಂತರವಾಗಿ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುತ್ತಿದೆ. ಅತ್ಯಂತ ಶಿಸ್ತಿನಿಂದ ಕಲಾ ವಿದ್ಯಾರ್ಥಿಗಳನ್ನು ಇಲ್ಲಿದ್ದಾರೆ. ಅಧ್ಯಯನ ಕೇಂದ್ರ ಉತ್ತಮ ಕಲಾವಿದರನ್ನು ಸೃಷ್ಟಿಸಿದೆ”.ಎಂದು ಹೇಳಿದರು.
ಶಾರದಾ ಕಲಾಸಿರಿ -2026 ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಅರ್ಥದಾರಿ ಮತ್ತು ಕಲಾವಿದ ಕೆ.ಕೃಷ್ಣ ವೈಲಾಯ ರವರು ಮಾತನಾಡಿ “ಯಕ್ಷಗಾನದಲ್ಲಿ ವೇಷ ಹಾಕಿ ಪ್ರೇಕ್ಷಕರನ್ನು ಸಂತೋಷ ಪಡಿಸುವುದು ಸಾರ್ಥಕತೆ ಕ್ಷಣ. ಅದುವೇ ದೇವತಾರಾದನೆ. ನನ್ನ ಸಾಮಾಜಿಕ ಬದುಕನ್ನು ದೇವರ ಆರಾಧನೆ ಎನ್ನುವಂತ ದೃಷ್ಟಿಯಿಂದ ನಡೆಸಿಕೊಂಡು ಬಂದಿದ್ದೇನೆ. ಅದಕ್ಕಾಗಿ ಇಂದು ನೀವೆಲ್ಲ ನನಗೆ ಗೌರವವನ್ನು ಕೊಟ್ಟಿದ್ದೀರಿ”.ಎಂದು ಹೇಳಿದರು.
ಆಚಾರ್ಯ ನಾಗತೀರ್ಥ ರವರು ‘ಶಾರದಾ ಕಲಾಸಿರಿ – 2026’ ಪ್ರಶಸ್ತಿ ಸ್ವೀಕರಿಸಿದರು.
ಒಂಬತ್ತು ವರ್ಷಗಳಿಂದ ಯಕ್ಷಗಾನ ಅಧ್ಯಯನ ಮಾಡಿ ವಿವಿಧ ವೇಷಗಳನ್ನು ನಿರ್ವಹಿಸದ ಉದಯೋನ್ಮುಖ ಕಲಾವಿದೆ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಕು.ದೃತಿ ಉಚ್ಚಲ ಶಾರದಾ ಬಾಲ ಕಲಾಸಿರಿ ಪ್ರಶಸ್ತಿ-2026 ಸ್ವೀಕರಿಸಿದರು.
ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ, ಯಕ್ಷಗಾನ ನಾಟ್ಯ ಗುರು ಯಕ್ಷಮಣಿ ಗಿರೀಶ್ ಗಡಿಕಲ್ಲು ವೇದಿಕೆ ಹಲ್ಲಿ ಉಪಸ್ಥಿತರಿದ್ದರು.
ಶ್ರೀ ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗೆ ನಿವೃತ್ತ ಪ್ರಾಂಶುಪಾಲರು ಶೀಲಾವತಿ ಕೊಳಂಬೆ, ಪಂಜ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ಆನಂದ ಗೌಡ ಜಳದಹೊಳೆ, ಪೈಂದೋಡಿ ಶ್ರೀ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು. ಶಿಕ್ಷಕ ಶಂಕರ್ ನೆಲ್ಯಾಡಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಹಾಲಿಂಗ ಸಂಪ ಪ್ರಾರ್ಥಿಸಿದರು. ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ನಿರೂಪಿಸಿದರು.ಗಿರೀಶ್ ಗಡಿಕಲ್ಲು ವಂದಿಸಿದರು.
ಬಳಿಕ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ) ಪಂಜ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.









































































































Leave a Comment

Your email address will not be published. Required fields are marked *

error: Content is protected !!
Scroll to Top