ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಪರಿವಾರ ಕಾನದಲ್ಲಿ ತ್ಯಾಜ್ಯ ಎಸೆದವರಿಗೆ ಗ್ರಾಮ ಪಂಚಾಯತಿ ವತಿಯಿಂದ 3000 ರೂಪಾಯಿ ದಂಡನೆ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ಪರಿಶೀಲಿಸಿದಾಗ ಲಭ್ಯವಾದ ವಿಳಾಸದಂತೆ ದಂಡಪಾವತಿಸುವಂತೆ ತಿಳಿಸಲಾಯಿತು. ಇದಕ್ಕೆ ಸಹಕರಿಸದಿದ್ದಾಗ ಸುಳ್ಳದ ಪೋಲೀಸ್ ಸಬ್ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ರವರ ಸಹಕಾರದೊಂದಿಗೆ ದಂಡನೆಯನ್ನು ವಿಧಿಸಲಾಗಿದೆ. ಮತ್ತು ಈ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಯಲಿದೆ ಎಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ ಆರ್ ಅವರು ತಿಳಿಸಿದ್ದಾರೆ
ಪರಿವಾರಕಾನ : ತ್ಯಾಜ್ಯ ಎಸೆದವರಿಗೆ ದಂಡ




































































