ವಿದ್ಯಾರ್ಥಿಗಳ ತಂಡವೊಂದು ನದಿಗೆ ಈಜಲು ಹೋದಾಗ, ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯ ನೀರಿನಲ್ಲಿ ಮುಳುಗಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜೀರಡ್ಕ ಎಂಬಲ್ಲಿ ಮೇ 19ರಂದು ಸಂಜೆ ನಡೆದಿದೆ.
ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಸಿಇ (ECE)
ವಿದ್ಯಾರ್ಥಿ, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ.
ಮಂಗಳವಾರ ಮೇ 19ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಏಳು ಜನ ಸ್ನೇಹಿತರ ತಂಡವು ಪಜೀರಡ್ಕದ ನೇತ್ರಾವತಿ ನದಿಗೆ ಈಜಾಡಲು ತೆರಳಿತ್ತು. ಈ ವೇಳೆ ನೀರಿನ ಸೆಳವಿಗೆ ಸಿಲುಕಿದ ಶ್ರೀಪೂರ್ಣ ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿ ಹುಡುಕಾಟ ಆರಂಭಿಸಿದರು.
ರಾತ್ರಿ 9:25ರ ವರೆಗೂ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಯಿತು.ಬಳಿಕ ಕತ್ತಲೆಯಾದ ಕಾರಣ ಯುವಕನ ಪತ್ತೆ ಸಾಧ್ಯವಾಗಿಲ್ಲ. ಹೀಗಾಗಿ ಇಂದಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ನಾಳೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ : ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ನಾಪತ್ತೆ





















































