ಪ್ರಚಲಿತ

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರ್ಲಾಯ ಭಾಗದಲ್ಲಿ ಜೂ.1ರಂದು ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.ಈ ಭಾಗದ ಕಿರ್ಲಾಯ ಕಿಶೋರ್ ಕುಮಾರ್ ಅವರಿಗೆ ಸೇರಿದ ಮೂರು ತೆಂಗಿನ ಮರ,ಒಂದು ಜೀಕುಜ್ಜೆ ಮರ, ಇಪ್ಪತ್ತು ಬಾಳೆ ಗಿಡಗಳನ್ನು ನಾಶ ಮಾಡಿವೆ.ಅಲ್ಲದೆ ನೆರೆಯ ಕೃಷಿಕರಾದ ಗಣೇಶ ಕಿರ್ಲಾಯ,ಕೆ.ಆರ್.ದಿನೇಶ,ಹರೀಪ್ರಸಾದ್ ಕಲ್ಲುಗದ್ದೆ,ನಾಗಪ್ಪ ಗೌಡ ಗುಂಡ್ಲ ಇತರ ತೋಟಗಳಿಗೆ ಆನೆಗಳು ನುಗ್ಗಿ ಕೃಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌.

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ Read More »

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ

ಸುಳ್ಯ ನಾವೂರು ಕಲ್ಕುಡ ದೈವಸ್ಥಾನಕ್ಕೆ ನಿವೃತ್ತ ಶಿಕ್ಷಕರೊಬ್ಬರು 2.60 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿಯನ್ನು ಹರಕೆಯ ರೂಪದಲ್ಲಿ ನೀಡಿದ್ದಾರೆ.ಸುಳ್ಯ ಅಂಬಟೆಡ್ಕದ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರಾದ ವಿಶಾಲಾಕ್ಷ ಮತ್ತು ಮುಕ್ತಾ ದಂಪತಿಯವರು ಹರಕೆಯ ಬಾಬ್ತು ದೈವದ ಮಣೆ ಮಂಚದ ಹೊದಿಕೆಗಾಗಿ ಸುಮಾರು ರೂ. 2.60 ಲಕ್ಷ ಮೌಲ್ಯದ ಬೆಳ್ಳಿಯನ್ನು ಒಪ್ಪಿಸಿದರು‌.ಈ ಸಂದರ್ಭದಲ್ಲಿ ಧರ್ಮ ದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು.

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ Read More »

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

ಪಂಜ ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಉದ್ಘಾಟನೆ ಮಾಡಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ದೀಪೋಜ್ವಲನೆಯ ಮೂಲಕ ಶಾಲಾ ಪ್ರಾರಂಭೋತ್ಸವಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಕಬ್ ಬುಲ್ ಬುಲ್ ಸಮವಸ್ತ್ರ ಮತ್ತು ಯೋಗ ಮ್ಯಾಟ್ ವಿತರಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳನ್ನು ಕರಕುಶಲ ಕಲೆಯಲ್ಲಿ ಪರಿಣಿತರನ್ನಾಗಿಸಲು ಹೊಲಿಗೆ ತರಬೇತಿಗೆ ಬೇಕಾದ ಹೊಲಿಗೆ

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ Read More »

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4ನೇಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಸುಳ್ಯದಲ್ಲಿ ಶುಭಾರಂಭಗೊಂಡಿದೆ.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರು ಫಾ.ಅಲ್ವಿನ್ ಡಿ‌.ಕುನ್ಹಾ ಟೈಲ್ಸ್ ಮಳಿಗೆ ಉದ್ಘಾಟಿಸಿದರು.ಸಯ್ಯದ್ ಸಹೀರ್ ತಂಗಳ್ ಕುಂಬೋಳ್ ಮಳಿಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಟಾರ್ ಟೈಲ್ಸ್ ಮಳಿಗೆಯ ಮಾಲಕ ರಿಯಾಝ್.ಪಿ.ಬಿ, ಸ್ಟಾರ್ ಗ್ರೂಪ್‌ನ ಸ್ಥಾಪಕ

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ Read More »

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್

ಗುಜರಾತ್ ಟೈಟಾನ್ಸ್ ವಿರುದ್ಧದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿ, ಐಪಿಎಲ್ 2026ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ವಿರಾಟ್ ಕೊಹ್ಲಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 156 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು. ಇದರೊಂದಿಗೆ ಕೋಟ್ಯಂತರ ಅಭಿಮಾನಿಗಳ “ಈ ಸಲಾನು ಕಪ್ ನಮ್ಹು” ಕನಸು ಕೊನೆಗೂ ನನಸಾಗಿದೆ. RCB ಪರ ವೆಂಕಟೇಶ್‌ ಅಯ್ಯರ್ 32, ವಿರಾಟ್ 75 ರನ್ ಗಳಿಸಿ ಮಿಂಚಿದರು.

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್ Read More »

ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನ(MIDCON)ನಲ್ಲಿ ಡೈಮಂಡ್ ಘಟಕ ಪ್ರಶಸ್ತಿ ಯೊಂದಿಗೆ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ, ಮೌರ್ಯ ದಳಪತಿ ಪುರಸ್ಕಾರ

ಘಟಕದ ವೈಯಕ್ತಿಕ ಅಭಿವೃದ್ಧಿ, ಸಮುದಾಯ ಸೇವೆ, ಮತ್ತು ನಾಯಕತ್ವ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಂಘಟನೆ ಹಾಗೂ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಇಂದು ಕಾಪುವಿನ ಇನಾಸನ್ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೆ.ಎಫ್. ಎಸ್‌. ಸಂತೋಷ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳ ಮನ್ನಣೆಯನ್ನು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ತಂಡ ಪಡೆದುಕೊಂಡಿದ್ದಾರೆ‌.ರೀಜನ್ ಬಿ ವಲಯಮಟ್ಟದ ಜೇಸಿಐ ಔಟ್ ಸ್ಟಾಂಡಿಂಗ್ ಘಟಕ ದಲ್ಲಿ ರನ್ನರ್ ಆಫ್, ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ದ್ವಿತೀಯ ಪ್ರಶಸ್ತಿ, ಡೈಮಂಡ್

ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನ(MIDCON)ನಲ್ಲಿ ಡೈಮಂಡ್ ಘಟಕ ಪ್ರಶಸ್ತಿ ಯೊಂದಿಗೆ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ, ಮೌರ್ಯ ದಳಪತಿ ಪುರಸ್ಕಾರ Read More »

ಅರಂತೋಡು : ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಚಂದನಾ ಯುವತಿ ಮಂಡಲ (ರಿ) ಅಡ್ತಲೆ -ಅರಂತೋಡು ಇವರ ಸಹಯೋಗದೊಂದಿಗೆ ಮೇ. ೩೧ ರಂದು ನಡೆಯಿತು. ಇದು ಆರಂತೋಡು ಗ್ರಾಮ ಪಂಚಾಯತ್ ನ ನಿರಂತರ ೮೪ನೇ ತಿಂಗಳ ಕಾರ್ಯಕ್ರಮವಾಗಿದ್ದು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಚಂದನಾ ಯುವತಿ ಮಂಡಲ (ರಿ) ಅಡ್ತಲೆ -ಆರಂತೋಡು ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು,ನಿಕಟ ಪೂರ್ವ ಪಂಚಾಯತ್‌ ಅಧ್ಯಕ್ಷರು ಪಂಚಾಯತ್ ಸದಸ್ಯರು,ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಘಟಕ ಸಿಬ್ಬಂದಿಗಳು ಹಾಗೂ ಆರಂತೋಡು ಪೇಟೆಯ ನಿವಾಸಿಗಳು

ಅರಂತೋಡು : ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ Read More »

ಇಂಜಿನಿಯರಿಂಗ್ ಕೋರ್ಸ್‌ಗಳ ಆಯ್ಕೆ: ಸೀಮಿತವಾಗದಿರಲಿ ಭವಿಷ್ಯದ ಹಾದಿ!

​ಇತ್ತೀಚಿನ ದಿನಗಳಲ್ಲಿ ಪಿಯುಸಿ ವಿದ್ಯಾರ್ಥಿಗಳನ್ನು “ಮುಂದೆ ನೀವು ಯಾವ ಕೋರ್ಸ್ ಆಯ್ಕೆ ಮಾಡುತ್ತೀರಿ?” ಎಂದು ಪ್ರಶ್ನಿಸಿದಾಗ ಅವರಿಂದ ಬಹುತೇಕ ಬರುವಂತಹ ಒಂದೇ ಉತ್ತರ ‘ಇಂಜಿನಿಯರಿಂಗ್’ ಎಂಬುದಾಗಿವಾಗಿರುತ್ತದೆ. ಆದರೆ ಅವರಲ್ಲಿ ನಿಖರವಾಗಿ ಯಾವ ಇಂಜಿನಿಯರಿಂಗ್ ವಿಭಾಗ ಎಂದು ಕೇಳಿದರೆ, ಅವರಲ್ಲಿ ಬಹುತೇಕರಿಂದ ಬರುವ ಉತ್ತರ ಕಂಪ್ಯೂಟರ್ ಸೈನ್ಸ್ ಎಂಬುದಾಗಿವಾಗಿರುತ್ತದೆ. ​ಹಾಗಾದರೆ ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಕೇವಲ ಈ ಒಂದು ವಿಭಾಗ ಮಾತ್ರ ಇದೆಯೇ? ಖಂಡಿತವಾಗಿಯೂ ಇಲ್ಲ. ಇಂಜಿನಿಯರಿಂಗ್ ಕೋರ್ಸ್‌ನಲ್ಲಿ ಹಲವು ಅದ್ಭುತ ವಿಭಾಗಗಳಿವೆ. ಆದರೆ ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಂಡಿರುವುದು ಕಂಪ್ಯೂಟರ್

ಇಂಜಿನಿಯರಿಂಗ್ ಕೋರ್ಸ್‌ಗಳ ಆಯ್ಕೆ: ಸೀಮಿತವಾಗದಿರಲಿ ಭವಿಷ್ಯದ ಹಾದಿ! Read More »

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನ ಚಂದ್ರಶೇಖರ ಎನ್ ಸೇವಾ ನಿವೃತ್ತಿ

ಅರಂತೋಡು:ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನ ಚಂದ್ರಶೇಖರ ಎನ್ ಅವರು ಮೇ 31, 2026 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.ಇವರು 01-09-1986 ರಂದು ಕರ್ತವ್ಯಕ್ಕೆ ಸೇರ್ಪಡೆಗೊಂಡು, 06-01-1998ರಿಂದ ಅನುದಾನಿತ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅರಂತೋಡು ಸಮೀಪದ ನೆಕ್ಕರೆ ಶಿವಪ್ಪ ಎನ್ ಹಾಗೂ ಪೂವಮ್ಮ ದಂಪತಿಗಳ ಪುತ್ರರಾದ ಇವರು, ಪತ್ನಿ ರತ್ನಾವತಿ (ರತ್ನ) ಗೃಹಿಣಿಯಾಗಿದ್ದಾರೆ. ಮಕ್ಕಳಾದ ದಕ್ಷತ್ ಎನ್ ಹಾಗೂ ತನುಶ್ರೀ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಸರಳತೆ, ಪ್ರಾಮಾಣಿಕತೆ ಮತ್ತು

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನ ಚಂದ್ರಶೇಖರ ಎನ್ ಸೇವಾ ನಿವೃತ್ತಿ Read More »

ಜೂ.3ರಂದು ಮುಖ್ಯಮಂತ್ರಿ ಯಾಗಿ ಡಿ.ಕೆ.ಶಿ ಪ್ರಮಾಣ. ವಚನ ಸ್ವೀಕಾರ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದು ನಿರ್ಧಾರವಾಗಿತ್ತು‌ಆದರೆ ಪ್ರಜಾಪ್ರಭುತ್ವದ ನಿಯಮದಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನೂತನ ಸಿಎಂ ಆಯ್ಕೆ ಅಧಿಕೃತವಾಗಿ ನಡೆದಿದೆ.ಜೂನ್ 3ರಂದು ಸಂಜೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್

ಜೂ.3ರಂದು ಮುಖ್ಯಮಂತ್ರಿ ಯಾಗಿ ಡಿ.ಕೆ.ಶಿ ಪ್ರಮಾಣ. ವಚನ ಸ್ವೀಕಾರ Read More »

error: Content is protected !!
Scroll to Top