ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರ್ಲಾಯ ಭಾಗದಲ್ಲಿ ಜೂ.1ರಂದು ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.
ಈ ಭಾಗದ ಕಿರ್ಲಾಯ ಕಿಶೋರ್ ಕುಮಾರ್ ಅವರಿಗೆ ಸೇರಿದ ಮೂರು ತೆಂಗಿನ ಮರ,ಒಂದು ಜೀಕುಜ್ಜೆ ಮರ, ಇಪ್ಪತ್ತು ಬಾಳೆ ಗಿಡಗಳನ್ನು ನಾಶ ಮಾಡಿವೆ.
ಅಲ್ಲದೆ ನೆರೆಯ ಕೃಷಿಕರಾದ ಗಣೇಶ ಕಿರ್ಲಾಯ,ಕೆ.ಆರ್.ದಿನೇಶ,ಹರೀಪ್ರಸಾದ್ ಕಲ್ಲುಗದ್ದೆ,ನಾಗಪ್ಪ ಗೌಡ ಗುಂಡ್ಲ ಇತರ ತೋಟಗಳಿಗೆ ಆನೆಗಳು ನುಗ್ಗಿ ಕೃಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌.









































































































Leave a Comment

Your email address will not be published. Required fields are marked *

error: Content is protected !!
Scroll to Top