ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನ ಚಂದ್ರಶೇಖರ ಎನ್ ಸೇವಾ ನಿವೃತ್ತಿ

ಅರಂತೋಡು:ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನ ಚಂದ್ರಶೇಖರ ಎನ್ ಅವರು ಮೇ 31, 2026 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು 01-09-1986 ರಂದು ಕರ್ತವ್ಯಕ್ಕೆ ಸೇರ್ಪಡೆಗೊಂಡು, 06-01-1998ರಿಂದ ಅನುದಾನಿತ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.









































































































ಅರಂತೋಡು ಸಮೀಪದ ನೆಕ್ಕರೆ ಶಿವಪ್ಪ ಎನ್ ಹಾಗೂ ಪೂವಮ್ಮ ದಂಪತಿಗಳ ಪುತ್ರರಾದ ಇವರು, ಪತ್ನಿ ರತ್ನಾವತಿ (ರತ್ನ) ಗೃಹಿಣಿಯಾಗಿದ್ದಾರೆ. ಮಕ್ಕಳಾದ ದಕ್ಷತ್ ಎನ್ ಹಾಗೂ ತನುಶ್ರೀ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

ಸರಳತೆ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ ಚಂದ್ರಶೇಖರ ಎನ್ ಅವರ ಸೇವೆಯನ್ನು ಕಾಲೇಜಿನ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಪ್ರಶಂಸಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top