ಸುಳ್ಯ ನಾವೂರು ಕಲ್ಕುಡ ದೈವಸ್ಥಾನಕ್ಕೆ ನಿವೃತ್ತ ಶಿಕ್ಷಕರೊಬ್ಬರು 2.60 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿಯನ್ನು ಹರಕೆಯ ರೂಪದಲ್ಲಿ ನೀಡಿದ್ದಾರೆ.
ಸುಳ್ಯ ಅಂಬಟೆಡ್ಕದ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರಾದ ವಿಶಾಲಾಕ್ಷ ಮತ್ತು ಮುಕ್ತಾ ದಂಪತಿಯವರು ಹರಕೆಯ ಬಾಬ್ತು ದೈವದ ಮಣೆ ಮಂಚದ ಹೊದಿಕೆಗಾಗಿ ಸುಮಾರು ರೂ. 2.60 ಲಕ್ಷ ಮೌಲ್ಯದ ಬೆಳ್ಳಿಯನ್ನು ಒಪ್ಪಿಸಿದರು.
ಈ ಸಂದರ್ಭದಲ್ಲಿ ಧರ್ಮ ದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು.
ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ
























































