ಸಂಪಾಜೆ ವಲಯದ ಮರ್ಕಂಜ ಗ್ರಾಮದ ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನವನ್ನು ಸುಳ್ಯ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶಾಂತಪ್ಪ ರೈ ಮತ್ತು ಸಮಿತಿಯ ಸದಸ್ಯರುಗಳಾದ ರಾಘವ ಗೌಡ ಕಂಜಿಪಿಲಿ ಗೋವಿಂದ ಅಳವುಪಾರೆ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕುಂಞಮು ಕಾರ್ಯದರ್ಶಿಯಾದ ರವಿ ಮತ್ತು ಸರ್ವ ಸದಸ್ಯರು ಹಾಗೂ ವಲಯದ ಮೇಲ್ವಿಚಾರಕರಾದ ಹರೀಶ್ ಆಚಾರ್ಯ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಗ್ರಾಮದ ಸೇವಾ ಪ್ರತಿನಿಧಿ ಯಾದ ರೋಹಿಣಿ ಉಪಸ್ಥಿತರಿದ್ದರು.
ಮರ್ಕಂಜ : ಪನ್ನೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ಮೊತ್ತ 45,000 ಸಹಾಯಧನ ಹಸ್ತಾಂತರ

























































