ಅಂತರ್ ರಾಜ್ಯ ಸಂಪರ್ಕ ರಸ್ತೆ ಕಾರಿಡಾರ್ ನಿರ್ಮಾಣ ಪ್ರಸ್ತಾವನೆ ಹಿನ್ನಲೆ, ನೂತನ ರಸ್ತೆ ಹಾದು ಹೋಗುವ ಮಾರ್ಗ ಪೆರಾಜೆ ಗ್ರಾಮದಲ್ಲಿ ಬದಲಾವಣೆ ಸಾಧ್ಯತೆ.

ಅಂತರ್ ರಾಜ್ಯ ಸಂಪರ್ಕ ರಸ್ತೆ ಕಾರಿಡಾರ್ ನಿರ್ಮಾಣ ಪ್ರಸ್ತಾವಣೆ ಹಿನ್ನಲೆಯಲ್ಲಿ ಪಾಣತ್ತೂರು – ಪೆರಾಜೆ ರಾಷ್ಟ್ರೀಯ ಹೆದ್ದಾರಿ ನೂತನ ರಸ್ತೆ ಹಾದು ಹೋಗುವ ಮಾರ್ಗ ಪೆರಾಜೆ ಗ್ರಾಮದಲ್ಲಿ ಬದಲಾವಣೆ ಸಾಧ್ಯತೆ ಇದ್ದು ಮಲೆನಾಡು ಜಂಟಿ ಕ್ರಿಯಾ ಸಮಿತಿಯವರು ಸೆ.16ರಂದು ರಸ್ತೆ ಪರಿಶೀಲನೆ ನಡೆಸಿದರು.





















































































ಮಲೆನಾಡು ಜಂಟಿ ಕ್ರಿಯಾ ಸಮಿತಿಯು ಕೇರಳ ರಾಜ್ಯದ ಪಾನತ್ತೂರು ಎಂಬಲ್ಲಿಂದ ಕಲ್ಲಪಳ್ಳಿ, ಕರ್ನಾಟಕ ರಾಜ್ಯದ ಸುಳ್ಯ ತಾಲೂಕುವಿನ ಬಡ್ಡಡ್ಕ, ಕೂರ್ನಡ್ಕ,ಅಲ್ಲಿಂದ ಕೊಡಗಿನ ಪೆರಾಜೆ ಗ್ರಾಮದ ಕುಂದಲ್ಪಾಡಿ ಸೇರಿ ಕುಂಬಳಚೇರಿ ಮಾರ್ಗವಾಗಿ ಕಾಸ್ಪಾಡಿ ಎಂಬಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಅಂತರ್ ರಾಜ್ಯ ಬೆಸೆಯುವ ನೂತನ ರಸ್ತೆ ಕಾರಿಡಾರ್ ಯೋಜನೆಯ ಹೆದ್ದಾರಿ ಮಾರ್ಗವನ್ನು ಈ ಹಿಂದೆ ಪೆರಾಜೆ ಗ್ರಾಮದಲ್ಲಿ ನಿಗದಿ ಪಡಿಸಿದ ರಸ್ತೆ ಮಾರ್ಗವನ್ನು ರದ್ದು ಗೊಳಿಸಿ ಮುಂದಿನ ರಾಷ್ಟ್ರೀಯ ಹೆದ್ದಾರಿಯು ಪೆರಾಜೆ ಗ್ರಾಮದೊಳಗೆ 275 ನೇ ರಾಷ್ಟ್ರೀಯ ಹೆದ್ದಾರಿ ಸೇರಲು ಕೂರ್ನಡ್ಕದಿಂದ 3.ಕಿ. ಮೀ ಇನ್ನಷ್ಟು ಹತ್ತಿರವಾಗಲು ಕುಂಬಳಚೇರಿ ಗ್ರಾಮವನ್ನು ಸೇರದೆ ಬದಲಿ ರಸ್ತೆ ಮಾರ್ಗವನ್ನು ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಸೆ.15ರಂದು ಸ್ಥಳ ಪರಿಶೀಲನೆ ಮಾಡಲಾಯಿತು.
ಕುಂದಲ್ಪಾಡಿ, ಗಡಿಗುಡ್ಡೆ ಮಾರ್ಗವಾಗಿ ಕಾಸ್ಪಾಡಿಯ ಹೆದ್ದಾರಿಗೆ ಸೇರುವ ಉದ್ದೇಶಿತ ರಸ್ತೆ ನಿರ್ಮಾಣಕ್ಕೆ ರಸ್ತೆ ಪಕ್ಕದ ಗ್ರಾಮಸ್ಥರಿಂದ ಈ ಹಿಂದೆ ಭೂಮಿ ನೀಡಿದಲ್ಲಿ ಸರ್ಕಾರದಿಂದ ಪರಿಹಾರ ಸಿಗಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿತ್ತು. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೂತನ ಕಾಯಿದೆ ಪ್ರಕಾರ ಎಲ್ಲಾ ಗ್ರಾಮಸ್ಥರಿಗೆ ಪರಿಹಾರ ದೊರಕಿಸಿ ಕೊಡಲು ಅವಕಾಶ ಇಲ್ಲದಿರುವ ಹಿನ್ನಲೆಯಲ್ಲಿ ಮುಂದಿನ ಅಂತರ್ ರಾಜ್ಯ ರಸ್ತೆಗೆ ಅಡ್ಡಿ ಆತಂಕ ಇಲ್ಲದೆ ಸಾಂಗವಾಗಿ ಕಾರ್ಯಗತ ಗೊಳಿಸುವಂತೆ ಕಾಪುಮಲೆ, ದೊಡ್ಡಡ್ಕ, ಕೆಂಗಮೊಟ್ಟೆ, ಹಾಗೂ ಇನ್ನಿತರ ಎಲ್ಲಾ ಗ್ರಾಮಸ್ಥರು ಪರಿಹಾರದ ಆಶೆಗೆ ಜೋತು ಬೀಳದೆ ತಮ್ಮ ತಮ್ಮ ಭೂಮಿಗಳನ್ನು ಬಿಟ್ಟುಕೊಡುವ ಒಕ್ಕೊರೊಳ ಹೇಳಿಕೆ ಮತ್ತು ಮನವಿ ಪತ್ರ ನೀಡಿದ ಭರವಸೆ ಪ್ರಕಾರ ನೂತನ ಅಂತರ್ ರಾಜ್ಯ ರಾಷ್ಟ್ರೀಯ ಹೆದ್ದಾರಿ ನಕ್ಷೆ ಬದಲಾಗುವ ಸಾಧ್ಯತೆ ಇದೆ.
ಇದರಿಂದ ರಸ್ತೆ ಪ್ರಯಾಣ ಮೂರು ಕಿ. ಮೀ ಕಡಿಮೆಯಾಗಿದ್ದು ರಸ್ತೆ ಬದಿಯ ಗ್ರಾಮಸ್ಥರ ಅಡ್ಡಿ ಇಲ್ಲದೆ ಸುಗಮವಾಗಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ರಸ್ತೆ ಹಾದು ಹೋಗುವ ಸ್ಥಳವನ್ನು ಗ್ರಾಮಸ್ಥರ ಪೂರ್ಣ ಒಪ್ಪಿಗೆಯಂತೆ ದೊಡ್ಡಡ್ಕ ಬಾಲಕೃಷ್ಣ,ಕೊಳಂಗಾಯ ಹರೀಶ್, ಕಲ್ಲಪಳ್ಳಿ ಪಂಚಾಯತ್ ಸದಸ್ಯ ರಾಧಾಕೃಷ್ಣ, ಪೆರುಮುಂಡ ಜಯಪ್ರಕಾಶ್, ಕಲ್ಲಪಳ್ಳಿ ಜಾರ್ಜ್, ಕರಿಕೆ ಸೀತಾರಾಮ ದೊಡ್ಡಡ್ಕ ದೀನರಾಜ್, ವಿಜಯಕೃಷ್ಣ ಭಟ್, ಆರ್. ಡಿ ಆನಂದ .ಮೊದಲಾದವರು ನೂತನ ರಸ್ತೆ ಸಮೀಕ್ಷೆ ಮಾಡಿದರು

Leave a Comment

Your email address will not be published. Required fields are marked *

error: Content is protected !!
Scroll to Top