March 2026

ಏ.13ರಿಂದ ಏ.21ರ ತನಕ ಮಕ್ಕಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2026

ಸುಳ್ಯ : ರಂಗಮಯೂರಿ ಕಲಾಶಾಲೆಯ ಬಹು ನಿರೀಕ್ಷಿತ ಮಕ್ಕಳ ರಾಜ್ಯಮಟ್ಟದ ಬೇಸಿಗೆ ಶಿಬಿರ ‘ಬಣ್ಣ-2026’ ಏಪ್ರಿಲ್ 13ನಿಂದ 21 ವರೆಗೆ ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕರಾದ ಭವಾನಿಶಂಕರ ಅಡ್ತಲೆ ಹಾಗೂ ಲೋಕೇಶ್ ಊರುಬೈಲ್ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಕ್ಕಳ ಕನಸು ನನಸಾಗಿಸುವ ವೇದಿಕೆ ಈ ಶಿಬಿರವಾಗಿದ್ದು ಮಕ್ಕಳ ಪ್ರಪಂಚದಲ್ಲಿ ಕಲೆ, ಸಾಹಿತ್ಯಕ್ಕೆ ಒತ್ತು ನೀಡಿ, ಬಣ್ಣ ಬಣ್ಣದ ರೆಕ್ಕೆಯನ್ನು ಕಟ್ಟಿ ಉತ್ತುಂಗಕ್ಕೆ […]

ಏ.13ರಿಂದ ಏ.21ರ ತನಕ ಮಕ್ಕಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2026 Read More »

ಅರಂತೋಡು ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಅರಂತೋಡು ಬದ್ರಿಯಾ ಜುಮಾ ಮಸೀದಿ ಯಲ್ಲಿ ಈದುಲ್ ಫಿತ್ರ್ ನ್ನು ಬಹಳ ಸಂಭ್ರಮ ದಲ್ಲಿ ಆಚರಿಸಲಾಯಿತುಖತಿಬ್ ರಾದ ಬಹು, ಇಸ್ಮಾಯಿಲ್ ಪೈಝಿ ರವರ ನೇತೃತ್ವ ದಲ್ಲಿ ಈದ್ ನಮಾಜ್ ನೆರೆವೇರಿಸಲಾಯಿ, ಮುಸ್ಲಿಂ ಭಾಂದವರು ಮನೆ ಮನೆ ಗಳಿಗೆ ತೆರಳಿ ಈದ್ ವಿನಯ ಮಾಡಿದರು

ಅರಂತೋಡು ಸಂಭ್ರಮದ ಈದುಲ್ ಫಿತ್ರ್ ಆಚರಣೆ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಯುಗಾದಿ ಮತ್ತು ರಮ್ಜಾನ್ ಹಬ್ಬದ ಸಂಭ್ರಮಾಚರಣೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಮಾ.18ರಂದು ಯುಗಾದಿ ಹಾಗೂ ರಮ್ಜಾನ್ ಹಬ್ಬಗಳನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಈ ವಿಶೇಷ ದಿನದ ಅಂಗವಾಗಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಬ್ಬದ ವಾತಾವರಣವನ್ನು ಸೃಷ್ಟಿಸಿ ಎಲ್ಲೆಡೆ ಹರ್ಷೋದ್ಗಾರ ಮೂಡಿಸಿದರು.ವಿದ್ಯಾರ್ಥಿಗಳು ಸಂಪ್ರದಾಯಬದ್ಧ ವೇಷಭೂಷಣಗಳನ್ನು ಧರಿಸಿ ಹಬ್ಬದ ವೈಭವವನ್ನು ಹೆಚ್ಚಿಸಿದರು. ಯುಗಾದಿ ಹಬ್ಬದ ಮಹತ್ವ, ಅದರ ಸಂಪ್ರದಾಯಗಳು ಹಾಗೂ ಬೆಲ್ಲ-ಬೇವು ಸೇವಿಸುವುದರ ಅರ್ಥವನ್ನು ಶಾಲೆಯ ಸಂಚಾಲಕಿ ಗೀತಾಂ ಜಲಿ ಟಿ. ಜಿ. ಯವರು ವಿವರಿಸಿದರು. ಅದೇ ರೀತಿ ರಮ್ಜಾನ್ ಹಬ್ಬದ ಮಹತ್ವ, ಉಪವಾಸದ ಆಚಾರ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಯುಗಾದಿ ಮತ್ತು ರಮ್ಜಾನ್ ಹಬ್ಬದ ಸಂಭ್ರಮಾಚರಣೆ Read More »

ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ವೈತ್ ಹುಂಡೈ ಸುಳ್ಯ ಶಾಖಾ ಮೆನೇಜರ್ ಸುಮನಾ ಬೆಳ್ಳಾರ್ಕರ್ ನೆರವೇರಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾಹಿತಿಗಳಾದ ವಿಮಲಾರುಣ ಪಡ್ಡಂಬೈಲು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿದರು. ಗ್ರಂಥಾಲಯದ ಸ್ಪೋಕನ್‌ ಇಂಗ್ಲಿಷ್ ಶಿಕ್ಷಕಿ ಗೀತಾಂಜಲಿ ಟಿ.ಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ ಶಿಕ್ಷಕಿ ಲಕ್ಷ್ಮಿ ಬಿ.ಎಸ್, ಮಂಡೆಕೋಲು ಶಾಲಾ ಶಿಕ್ಷಕಿ ಭವಾನಿ ಮುಡೂರು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕ ಮಾತನ್ನಾಡಿದರು.ಸಭಾ

ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ Read More »

ಚಾಂದ್ರಮಾನ ಯುಗಾದಿ – ಸಂಪ್ರದಾಯ, ಸಂಸ್ಕೃತಿ ಮತ್ತು ನವಚೈತನ್ಯದ ಹಬ್ಬ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನದ ಅವಿಭಾಜ್ಯ ಅಂಗ. ಅವು ಕೇವಲ ಸಂಭ್ರಮ-ಸಡಗರಕ್ಕೆ ಮಾತ್ರ ಸೀಮಿತವಾಗದೆ, ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಅಂತಹ ಹಬ್ಬಗಳಲ್ಲಿ ಯುಗಾದಿ ವಿಶೇಷ ಸ್ಥಾನವನ್ನು ಹೊಂದಿದೆ.“ಯುಗ + ಆದಿ” ಎಂಬ ಪದಗಳಿಂದ ರೂಪುಗೊಂಡ ಯುಗಾದಿ, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ವಸಂತ ಋತುವಿನಲ್ಲಿ ಬರುವ ಈ ಹಬ್ಬ ಪ್ರಕೃತಿಯ ನವಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಮರಗಳು ಚಿಗುರಿ, ಹೂವು-ಹಣ್ಣುಗಳಿಂದ ಹಸಿರಾಗಿ ಕಂಗೊಳಿಸುವ

ಚಾಂದ್ರಮಾನ ಯುಗಾದಿ – ಸಂಪ್ರದಾಯ, ಸಂಸ್ಕೃತಿ ಮತ್ತು ನವಚೈತನ್ಯದ ಹಬ್ಬ Read More »

ನಾಳೆ ಸಾರ್ವತ್ರಿಕ ರಜೆ ಘೊಷಿಸಿ ಜಿಲ್ಲಾಧಿಕಾರಿ ಆದೇಶ

ದ.ಕ – ಉಡುಪಿ ಜಿಲ್ಲೆಗಳಲ್ಲಿ ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್‌ ಫಿತ‌ರ್ ಹಬ್ಬವು ಶುಕ್ರವಾರ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಆದೇಶಿಸಿದ್ದಾರೆ.

ನಾಳೆ ಸಾರ್ವತ್ರಿಕ ರಜೆ ಘೊಷಿಸಿ ಜಿಲ್ಲಾಧಿಕಾರಿ ಆದೇಶ Read More »

ಸುಳ್ಯ ಸೀಮೆ ತೊಡಿಕಾನ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ಸೀಮೆ ತೊಡಿಕಾನ ಶ್ರೀ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏಪ್ರಿಲ್ 13 ರಿಂದ 20 ರ ತನಕ ವೈಭವದಿಂದ ನಡೆಯಲಿದ್ದು ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಲು ಜಾತ್ರೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭ ದೇವಳದ ಅಕ್ಷಯ ಮಂದಿರದಲ್ಲಿ ಮಾ.19ರಂದು ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಸಭೆಯ ಅಧ್ಯಕ್ಷತೆ ವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಜಾತ್ರೋತ್ಸವಕ್ಕೆ ಉಪಸಮಿತಿಗಳು ಯಾವ ರೀತಿ ತಯಾರಿ ನಡೆಸಬೇಕೆಂದು ಮಾಹಿತಿ

ಸುಳ್ಯ ಸೀಮೆ ತೊಡಿಕಾನ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಅಡ್ತಲೆ : ಒಂಟಿ ಸಲಗದಿಂದ ಬೆಳೆ ನಾಶ

ಮಾ.18ರಂದು ರಾತ್ರಿ ಅಡ್ತಲೆ ಪರಿಸರದಲ್ಲಿ ಒಂಟಿ ಸಲಗವೊಂದು ದಾಳಿ ಅಪಾರ ಬೆಳೆ ನಾಶ ಮಾಡಿದ ಘಟನೆ ವರದಿಯಾಗಿದೆ‌.ಅಡ್ತಲೆ ಬೆಂಡೆಡ್ಕ ನಿವಾಸಿ ಜನಾರ್ಧನ ಮೇಲಡ್ತಲೆ ಹಾಗೂ ಕೇಶವ ಮೇಲಡ್ತಲೆ ಇವರ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ತೆಂಗು, ಅಡಿಕೆ, ಬಾಳೆ ಹಾಗೂ ಕೊಕ್ಕೋ ಬೆಳೆಗಳಿಗೆ ಹಾನಿ ಮಾಡಿದೆ.

ಅಡ್ತಲೆ : ಒಂಟಿ ಸಲಗದಿಂದ ಬೆಳೆ ನಾಶ Read More »

ಸುಳ್ಯ ತಾಲೂಕು ಯಾದವ ಯುವ ವೇದಿಕೆ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಸುಳ್ಯ ತಾಲೂಕು ಯಾದವ ಯುವ ವೇದಿಕೆ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮಾರ್ಚ್ 15 ರಂದು ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು.ಶಿಬಿರವನ್ನು ಕಾಲೇಜಿನ ಡೀನ್ ಡಾ.ನೀಲಾಂಬಿಕೈ ನಟರಾಜನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇಧಿಕೆ ಅಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ವಹಿಸಿದ್ದರು.ಈ ಸಂದರ್ಭದಲ್ಲಿ ಕಾಲೇಜಿನ ರಿಜಿಸ್ಟ್ರಾರ್ ಡಾ.ಸಂದೇಶ್ ರೈ, ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಸತ್ಯವತಿ ಆರ್ ಆಳ್ವ, ಬ್ಲಡ್ ಬ್ಯಾಂಕ್ ಅಧಿಕಾರಿಗಳಾದ ಡಾ.ನವ್ಯ ಬಿ.ಎನ್, ಡಾ.ಅಂಜಲಿ ರಾವ್, ತಾಲೂಕು ಅಧ್ಯಕ್ಷ

ಸುಳ್ಯ ತಾಲೂಕು ಯಾದವ ಯುವ ವೇದಿಕೆ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ Read More »

ಅರೆಭಾಷೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ಅರೆಭಾಷೆ ರಂಗ್ -2026 ಕಾರ್ಯಕ್ರಮ

ಸುಳ್ಯ: ಭಾಷೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯ. ಅರೆಭಾಷೆ ಸಾಹಿತ್ಯ, ಸಂಸ್ಕೃತಿ- ಇನ್ನಷ್ಟು ಬೆಳೆಯಬೇಕು ಎಂಬ ದೃಷ್ಠಿಯಿಂದ ಯುವಜ‌ನರನ್ನು ಆಕರ್ಷಿಸಲು ಅರೆಭಾಷೆ ಅಕಾಡೆಮಿ ವತಿಯಿಂದ ಕಾಲೇಜುಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಡೆಮಿಯ ವತಿಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಹಾಗೂ ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಸಹಯೋಗದಲ್ಲಿ ಎನ್.ಎಂ.ಸಿಯಲ್ಲಿ ಮಾ.18ರಂದುಅರೆಭಾಷೆ ರಂಗ್ -2026

ಅರೆಭಾಷೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ಅರೆಭಾಷೆ ರಂಗ್ -2026 ಕಾರ್ಯಕ್ರಮ Read More »

error: Content is protected !!
Scroll to Top