ಅರಂತೋಡು ಗ್ರಾಮದ ಉಳುವಾರು ಕುಟುಂಬದ ತಳ ಮನೆಯಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಬೈಲುಕೋಲವು ಮಾ.30 ರಂದು ನಡೆಯಿತು.
ಮಾ.23 ರಂದು ಗೊನೆ ಮುಹೂರ್ತ ನಡೆದು, 29 ರಂದು ರಾತ್ರಿ ಕೂಡಿ , ಮಾ.30 ರಂದು ಬೆಳಿಗ್ಗೆ ಮಹಾವಿಷ್ಣು ಮೂರ್ತಿ ದೈವದ ಬೈಲು ಕೋಲವು ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಯು. ಬಿ. ನಾರಾಯಣ, ಅಧ್ಯಕ್ಷರು ಸರ್ವ ಸದಸ್ಯರು, ಉಳುವಾರು ಕುಟುಂಬಸ್ಥರು, ಊರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೈವದ ಅರಶಿನ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು. ಆಗಮಿಸಿದ ಎಲ್ಲಾ ಭಕ್ತಾಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಅರಂತೋಡು : ಉಳುವಾರು ಕುಟುಂಬದ ತಳ ಮನೆಯಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಕೋಲ














































