ಅರಂಬೂರು : ಶಾಲಾ ಶೌಚಾಯ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಇಡ್ಯಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ ಆರ್ ಪಿ ಎಲ್ ವತಿಯಿಂದ ನೀಡಲ್ಪಟ್ಟ ನೂತನ ಶೌಚಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಏ.1 ರಂದು ನಡೆಯಿತು.





















































































ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ರವರು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸುಳ್ಳ ಕ್ಷೇತ್ರ ಶಿಕ್ಷಣಾಧಿಕಾರಿ ಯಮುನಪ್ಪ ಸಿದ್ದಪ್ಪ ಹರಗಿ,ಆಲೆಟಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶ್ರೀಮತಿ ಶೀತಲ್‌, ರೊಟೇರಿಯನ್ ಹೇಮಂತ್ ಕಾಮತ್, ರೋಟೋರಿಯನ್ ಪ್ರಭಾಕರ್ ನಾಯರ್,ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಯೂಸುಫ್ ಅಂಜಿಕ್ಕಾರ್, ಸ್ಥಳಿಯ ಉದ್ಯಮಿ ಹಾಗೂ ಗುತ್ತಿಗೆದಾರರಾದ ಜಗದೀಶ್ ಸರಳಿಕುಂಜ, ಸ್ಥಳೀಯ ನಿವಾಸಿ ಹಿರಿಯರಾದ ಶ್ರೀಪತಿ ಭಟ್,ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಶ್ರೀಮತಿ ಅನಿತಾ, ಶ್ರೀಮತಿ ವೇದಾವತಿ, ಪುಷ್ಪಾವತಿ ಕುಡೆಕಲ್ಲು,ಸುದೇಶ್,ಹಾಗೂ ಎಸ್ಟಿಎಂಸಿ ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕ ವೃಂದ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿ ನಿರೂಪಿಸಿದರು.ಆಶೋಕ್ ಪೀಚೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top