ಪಯಸ್ವಿನಿ ಪ್ರಾ ಕೃ ಪ ಸಹಕಾರ ಸಂಘದಿಂದ ತೆಂಗಿನಕಾಯಿ ಖರೀದಿ ಪ್ರಾರಂಭ.

ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಾಲಂಬಿ ಶಾಖೆಯಲ್ಲಿ ತಾ.15 ಬುಧವಾರದಂದು ಕೃಷಿಕನ ಹಬ್ಬ ವಿಷು ಸಂದರ್ಭದಲ್ಲಿ ತೆಂಗಿನಕಾಯಿ ಖರೀದಿ ವ್ಯವಹಾರಕ್ಕೆ ,ಪ್ರಗತಿಪರ ಕೃಷಿಕರಾದ ಶ್ರೀ ನಿಡಿಂಜಿ ಬೋಜಪ್ಪ ಮತ್ತು ಶ್ರೀ ಕೊಪ್ಪದ ಭುವನೇಶ್ವರರವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ಶ್ರೀ ಅನಂತ್ ಊರುಬೈಲು ಮಾತನಾಡಿ,ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ನೀಡಿದ ಭರವಸೆಯಂತೆ,ಇಂದು ಸ್ಥಳೀಯವಾಗಿ ಕೃಷಿಕ ಬೆಳೆಯುವ ಹೆಚ್ಚಿನೆಲ್ಲಾ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು,ಆರೋಗ್ಯಕರ ಸ್ಪರ್ಧೆಯಿಂದ ಅಂತಿಮವಾಗಿ ಕೃಷಿಕನಿಗೆ ಯೋಗ್ಯ ಬೆಲೆ ಸಿಗುವಂತಾಗಿದೆ ಎಂದು ಅಭಿಪ್ರಾಯ ಪಟ್ಟರು.
ನೂತನ ವ್ಯವಹಾರದಲ್ಲಿ ಮಾಜಿ ಗ್ರಾ ಪಂ ಅದ್ಯಕ್ಷ ಶ್ರೀ ಯು.ಕೆ ದಿನೇಶ್ ಕುಮಾರ್ ಕೃಷಿಕರಾದ ಶ್ರೀ ಪನೆಡ್ಕ ಸೋಮಣ್ಣ ,ಬಂಡೆಡ್ಕ ಹರೀಶ್ ,ವಿಶ್ವನಾಥ ಚಳ್ಳಂಗಾಯ ಸೇರಿದಂತೆ ಕೃಷಿಕರು ಉತ್ಸಾಹದಿಂದ ಕೈ ಜೋಡಿಸಿದರು.
ಸಂಸ್ಥೆಯ ಸಿಇಓ ಶ್ರೀ ಆನಂದ.ಬಿ.ಕೆ ,ನಿರ್ದೇಶಕರಾದ ಶ್ರೀ ದಯಾನಂದ ಪನೆಡ್ಕ, ದಿನೇಶ್ ಸಣ್ಣಮನೆ,ಟಾಟಾ ಅರಂಬೂರು ,ಪ್ರಿಯಾಂಕ ಹೊಸೂರು ಮತ್ತು ಸಿಬ್ಬಂದಿವರ್ಗ ಮತ್ತು ಕೃಷಿಕಬಂದುಗಳು ಉಪಸ್ಥಿತರಿದ್ದರು.





















































































Leave a Comment

Your email address will not be published. Required fields are marked *

error: Content is protected !!
Scroll to Top