ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ವಿವಿಧ ಸಾಂಸ್ಕೃತಿಕ ,ವೈದಿಕ ಕಾರ್ಯಕ್ರಮಗಳ ಮೂಲಕ ವೈಭಯುತವಾಗಿ ನಡೆದು ಏ.20ರಂದು ಜಾತ್ರೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ಏ.19ರಂದು ಬೆಳಿಗ್ಗೆ ಆರಾಟ ಬಾಗಿಲು ತೆರಯಲಾಯಿತು.ರಾತ್ರಿ ಉತ್ಸವ ಬಲಿ ನಡೆದು ದೇವರಿಗೆ ವಸಂತ ಮಟ್ಟದಲ್ಲಿ ಹಾಗೂ ಕಟ್ಟೆಯಲ್ಲಿ ಪೂಜೆಯಾಗಿ ಜಳಕ್ಕೆ ತೆರಳಿದರು.ಜಳಕವಾಗಿ ದೇವರು ಬಂದ ಬಳಿಕ ದರ್ಶನ ಬಲಿಯಾಗಿ ಬಟ್ಟಲು ಕಾಣಿಕೆಯಾಗಿ ಧ್ವಜಾಅವರೋಹಣ ನಡೆದು ಸಂಪ್ರೋಕ್ಷಣೆ ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಕೊನೆಗೊಂಡಿತು.ಈ ಸಂದರ್ಭಗಳಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲುಮೂಲೆ,ಜಾತ್ರೋತ್ಸವ ಅಧ್ಯಕ್ಷ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ , ದೇವಳದ ಇ.ಒ ಅವಿನ್ ರಂಗತ್ ಮಲೆ, ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ, ಆರ್ಥಿಕ ಸಮಿತಿ ಸಂಚಾಲಕ ಕಿಶೋರ್ ಕುಮಾರ್ ಯು.ಯಂ,ಸಹಸಂಚಾಲಕ ದೀಪಕ್ ಕುತ್ತಮೊಟ್ಟೆ, ಹಸಿರುವಾಣಿ ಸಮಿತಿ ಆಮಂತ್ರಣ ಬಟವಾಡೆ ಸಮಿತಿ ಸಂಚಾಲಕರ ಕೇಶವ ಅಡ್ತಲೆ,ಸಹಸಂಚಾಲಕ ರವೀಂದ್ರ ಪಂಜಿಕೋಡಿ, ದಯಾನಂದ ಪತ್ತುಕುಂಜ, ಸಂಯೋಜಕ ವಸಂತ ಪೆಲ್ತಡ್ಕ, ವೈದಿಕ ಸಮಿತಿ ಸಂಚಾಲಕ ಗಣಪತಿ ಭಟ್ ಪಾದೆಕಲ್ಲು, ಸಹಸಂಚಾಲಕ ಕೃಪಾಶಂಕರ ತುದಿಯಡ್ಕ,ಕೃಷ್ಣ ಬೈಪಡಿತ್ತಾಯ,ಸಂಯೋಜಕ ತೀರ್ಥರಾಮ ಯು.ಕೆ, ಆಹಾರ ಸಮಿತಿ ಸಂಚಾಲಕ ಉಮಾಶಂಕರ ಅಡ್ಯಡ್ಕ, ಸಹಸಂಚಾಲಕ ಕೆ.ಕೆ. ನಾರಾಯಣ ಕುಂಟುಕಾಡು ಸಂಯೋಜಕ ಕೆ.ಕೆ. ಬಾಲಕೃಷ್ಣ,ಅಲಂಕಾರ ಸಮಿತಿ ಸಂಚಾಲಕ ಬಾನುಪ್ರಕಾಶ್ ಮೂಡನಕಜೆ,ಸಹಸಚಾಲಕ ಸೋಮಶೇಖರ ಪೈಕ ಸಂಯೋಜಕ ಸತ್ಯಪ್ರಸಾದ್ ಗಬ್ಬಲ್ಕಜೆ, ಸ್ವಯಂ ಸೇವಾ ಸಮಿತಿ ಸಂಚಾಲಕ ಚಂದ್ರಶೇಖರ ಆಚಾರ್ಯ,ಸಹಸಂಚಾಲಕಸುಂದರ ಬಾಚಿನಡ್ಕ, ಸಂಯೋಜಕ ತಿಮ್ಮಯ್ಯ ಮೆತ್ತಡ್ಕ, ಮಹಿಳಾ ಸಮಿತಿ ಸಂಚಾಲಕಿ ಚಂದ್ರಕಲಾ ಕುತ್ತಮೊಟ್ಟೆ, ಸಹಸಂಚಾಲಕಿ ಭಾರತಿ ಪುರುಷೋತ್ತಮ,ಸಂಯೋಜಕಿ ಮಾಲತಿ ಬೋಜಪ್ಪ,ಸಾಂಸ್ಕೃತಿಕ ಸಮಿತಿ ಸಂಚಾಲಕ ಭವಾನಿಶಂಕರ ಆಡ್ತಲೆ, ಸಹ ಸಂಚಾಲಕರಾಗಿ ವೇದಾವತಿ ಚನ್ನಪ್ಪ ಕುತ್ತಮೊಟ್ಟೆ,ಸಂಯೋಜಕಿ ಚಂಚಲಾಕ್ಷಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸುಳ್ಯ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಸೇರಿದಂತೆ ಸೀಮೆಯ ಉಪಸ್ಥಿತರಿದ್ದರು.
ಯಶಸ್ವಿಯಾಗಿ ನಡೆದ ಜಾತ್ರೋತ್ಸವ
ಸುಮಾರು ಎರಡು ತಿಂಗಳ ಹಿಂದೆ ಸುಳ್ಯ ಸೀಮೆಯ 18 ಗ್ರಾಮಗಳಲ್ಲಿ ಆಮಂತ್ರಣ ಪತ್ರಿಕೆ ಹಂಚಿಕೆ ಹಸಿರುವಾಣಿ ಸಂಗ್ರಹದ ಬಗ್ಗೆ ಜಾತ್ರೋತ್ಸವ ಸಮಿತಿ ನೇತ್ರತ್ವದಲ್ಲಿ ಸಭೆ ನಡೆಸಿ ಪೂರ್ವ ತಯಾರಿ ನಡೆಸಲಾಗಿತ್ತು.ಇದರಿಂದ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲು ಕಾರಣವಾಯಿತು.
ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಆರಾಟ ಮಹೋತ್ಸವ ನಡೆದು ಧ್ವಜಾಅವರೋಣ ಮೂಲಕ ಸಂಪನ್ನ














































