April 2026

ತೊಡಿಕಾನ : ಮನ‌ರಂಜಿಸಿದ ನೃತ್ಯ ಸಂಗಮ ಕಾರ್ಯಕ್ರಮ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದ್ದು ದಿನ ನಿತ್ಯ ದೇವರ ಉತ್ಸವದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನರಂಜಿಸುತ್ತಿದೆ.ಸುಳ್ಯ ಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತಏ.16ರಂದು ಗಾನ-ನೃತ್ಯ ಅಕಾಡೆಮಿ ಸುಳ್ಯ ಇದರಗುರು ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ವಿದುಷಿ ಮಂಜುಶ್ರೀ ರಾಘವ್ ಇವರ ಶಿಷ್ಠೆಯರಿಂದ ನ್ರತ್ಯ ಸಂಘಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ […]

ತೊಡಿಕಾನ : ಮನ‌ರಂಜಿಸಿದ ನೃತ್ಯ ಸಂಗಮ ಕಾರ್ಯಕ್ರಮ Read More »

ತೊಡಿಕಾನ : ದೇವರ ನಡುಬೆಳಗು ಉತ್ಸವ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಏ.13ರಂದು ಧ್ವಜಾರೋಹಣದ ಮೂಲಕ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಏ.16ರಂದು ರಾತ್ರಿ ನಡುಬೆಳಗು ಉತ್ಸವ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸಮಿತಿಯವರು ಮಾಜಿ ವ್ಯವಸ್ಥಾಪನಾ ಸಮಿತಿಯವರು,,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆ ಭಕ್ತಾಧಿಗಳು ಉಪಸ್ಥಿತರಿದ್ದು ಶ್ರೀ ದೇವರ ದರ್ಶನ ಪಡೆದರು.

ತೊಡಿಕಾನ : ದೇವರ ನಡುಬೆಳಗು ಉತ್ಸವ Read More »

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ಸಣ್ಣ ದರ್ಶನ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಏ.13ರಂದು ಧ್ವಜಾರೋಹಣದ ಮೂಲಕ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಏ.16ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸಮಿತಿಯವರು ಮಾಜಿ ವ್ಯವಸ್ಥಾಪನಾ ಸಮಿತಿಯವರು,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆ ಭಕ್ತಾಧಿಗಳು ಉಪಸ್ಥಿತರಿದ್ದು ಶ್ರೀ ದೇವರ ದರ್ಶನ ಪಡೆದರು.

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ಸಣ್ಣ ದರ್ಶನ ಬಲಿ Read More »

ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ; ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆ

ಲೋಕಸಭಾ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಯಿಂದ ದಕ್ಷಿಣ ರಾಜ್ಯಗಳ ಶಕ್ತಿ ಕುಗ್ಗಲಿದೆ ಎಂಬ ಭೀತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ. ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯಲ್ಲಿ ದಕ್ಷಿಣ ಭಾರತದ ಒಟ್ಟು 129 ಸಂಸದರಿದ್ದಾರೆ. ಕ್ಷೇತ್ರ ಮರುವಿಂಗಡಣೆಯ ನಂತರ ರಚನೆಯಾಗುವ ಹೊಸ ಸದನದಲ್ಲಿ ದಕ್ಷಿಣದ ಸಂಸದರ ಸಂಖ್ಯೆ 195ಕ್ಕೆ ಏರಲಿದೆ. ಇದರಿಂದ ಲೋಕಸಭೆಯಲ್ಲಿ ಅವರ ಒಟ್ಟಾರೆ ಶಕ್ತಿ 23.97% ಆಗಲಿದ್ದು, ಯಾವುದೇ ರೀತಿಯ ಪ್ರಾತಿನಿಧ್ಯದ ನಷ್ಟವಾಗುವುದಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿಯೂ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ

ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ; ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆ Read More »

ತೊಡಿಕಾನ ಜಾತ್ರೋತ್ಸವದಲ್ಲಿ ದಿನ ನಿತ್ಯ ಮನರಂಜಿಸುತ್ತಿವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದ್ದು ದಿನ ನಿತ್ಯ ದೇವರ ಉತ್ಸವದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನರಂಜಿಸುತ್ತಿದೆ. ಏ.13ರಂದು ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ದೇವಳದ ವಠಾರದಲ್ಲಿ ನಡೆದ ವರ್ಣಪಲ್ಲಟ ಯಕ್ಷಗಾನ ಬಯಲಾಟ ಉತ್ತಮವಾಗಿ ಮೂಡಿ ಬಂದು ಯಕ್ಷಭಿಮಾನಿಗಳ ಮನಕುಣಿಸಿತು..ಏ.15ರಂದು ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಅಪ್ಪು ಮೆಲೋಡಿಸ್ ಕುದ್ರೆಪಾಯ ಚೆಂಬು ಕೊಡಗು ವತಿಯಿಂದ ಭಕ್ತಿ

ತೊಡಿಕಾನ ಜಾತ್ರೋತ್ಸವದಲ್ಲಿ ದಿನ ನಿತ್ಯ ಮನರಂಜಿಸುತ್ತಿವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು Read More »

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ

ಪಾಡ್‌ಕಾಸ್ಟ್‌ ಒಂದರಲ್ಲಿ ಆಂಕರ್‌ ಅನುಶ್ರೀ ಮಾತಾಡಿದ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳನ್ನು ಅದರಲ್ಲೂ ಸೆಲೆಬ್ರಿಟಿ ಹೆಣ್ಣು ಮಕ್ಕಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಎಷ್ಟು ತುಚ್ಚವಾಗಿ ಕಾಮೆಂಟ್‌ ಮಾಡುತ್ತಾರೆ ಎಂಬುದನ್ನು ಅನುಶ್ರೀಯವರು ಹೇಳಿದ್ದರು. ಕೆಲವೊಂದು ಅನಾಗರಿಕ ಪದ ಬಳಕೆಗಳಿಂದ ಮನಸ್ಸಿಗಾಗುವ ಸಂಕಟವನ್ನು ವಿವರಿಸುತ್ತಾ ಫಿಸಿಕಲ್‌ ರೇಪ್‌ನಂತೆಯೇ ಮೆಂಟಲ್‌ ರೇಪ್‌ ಎಷ್ಟು ಕ್ರೂರವಾಗಿ ನಡೆಯುತ್ತಿದೆ ಎಂಬುದನ್ನು ಹೇಳಿದ್ದರು. ಅನುಶ್ರೀ ಹೇಳಿದ ಈ ಮಾತುಗಳು ಕೇವಲ ಅನುಶ್ರೀಗಷ್ಟೇ ಅಲ್ಲ, ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳಿಂದ ಹಿಡಿದು ಸಂಸ್ಕಾರವಂತ ಎಲ್ಲಾ

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದಲ್ಲಿ ಜಾತ್ರೆ ಪ್ರಯುಕ್ತ ಉತ್ಸವ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಏ.13ರಂದು ಧ್ವಜಾರೋಹಣದ ಮೂಲಕ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಏ.15ರಂದು ರಾತ್ರಿ ಉತ್ಸವ ಬಲಿ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸಮಿತಿಯವರು ಮಾಜಿ ವ್ಯವಸ್ಥಾಪನಾ ಸಮಿತಿಯವರು,,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆ ಭಕ್ತಾಧಿಗಳು ಉಪಸ್ಥಿತರಿದ್ದು ಉತ್ಸವ ಬಲಿಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದಲ್ಲಿ ಜಾತ್ರೆ ಪ್ರಯುಕ್ತ ಉತ್ಸವ ಬಲಿ Read More »

ಪಯಸ್ವಿನಿ ಪ್ರಾ ಕೃ ಪ ಸಹಕಾರ ಸಂಘದಿಂದ ತೆಂಗಿನಕಾಯಿ ಖರೀದಿ ಪ್ರಾರಂಭ.

ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ಶ್ರೀ ಅನಂತ್ ಊರುಬೈಲು ಮಾತನಾಡಿ,ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ನೀಡಿದ ಭರವಸೆಯಂತೆ,ಇಂದು ಸ್ಥಳೀಯವಾಗಿ ಕೃಷಿಕ ಬೆಳೆಯುವ ಹೆಚ್ಚಿನೆಲ್ಲಾ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು,ಆರೋಗ್ಯಕರ ಸ್ಪರ್ಧೆಯಿಂದ ಅಂತಿಮವಾಗಿ ಕೃಷಿಕನಿಗೆ ಯೋಗ್ಯ ಬೆಲೆ ಸಿಗುವಂತಾಗಿದೆ ಎಂದು ಅಭಿಪ್ರಾಯ ಪಟ್ಟರು.ನೂತನ ವ್ಯವಹಾರದಲ್ಲಿ ಮಾಜಿ ಗ್ರಾ ಪಂ ಅದ್ಯಕ್ಷ ಶ್ರೀ ಯು.ಕೆ ದಿನೇಶ್ ಕುಮಾರ್ ಕೃಷಿಕರಾದ ಶ್ರೀ ಪನೆಡ್ಕ ಸೋಮಣ್ಣ ,ಬಂಡೆಡ್ಕ ಹರೀಶ್ ,ವಿಶ್ವನಾಥ ಚಳ್ಳಂಗಾಯ

ಪಯಸ್ವಿನಿ ಪ್ರಾ ಕೃ ಪ ಸಹಕಾರ ಸಂಘದಿಂದ ತೆಂಗಿನಕಾಯಿ ಖರೀದಿ ಪ್ರಾರಂಭ. Read More »

ಪಾಲಡ್ಕ : ಕಾರು ಪಿಕಪ್ ನಡುವೆ ಅಪಘಾತ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಪಿಕಪ್ ನಡುವೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಪಿಕಪ್ ನಲ್ಲಿದ್ದ ಪ್ರಯಾಣಿಕನ ಕೈ ಮುರಿತಗೊಂಡಿದೆ ಎಂದು ತಿಳಿದು ಬಂದಿದೆ.ಕಾರು ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿತ್ತು.ಪಿಕಪ್ ಸುಳ್ಯ ಕಡೆಯಿಂದ ಮಡಿಕೇರಿ ಕಡೆ ತೆರಳುತ್ತಿತ್ತು.ಗಾಯಗೊಂಡ ವ್ಯಕ್ತಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಪಾಲಡ್ಕ : ಕಾರು ಪಿಕಪ್ ನಡುವೆ ಅಪಘಾತ Read More »

ಅಮರ ಮುಡ್ನೂರು ಗ್ರಾಮದ ಮುಂಡಕಜೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ತುರ್ತು ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು

ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಕಜೆಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾಗರಿಕರು ಪರದಾಡುವಂತಾಗಿದ್ದು ಸ್ಥಳೀಯರ ಕೋರಿಕೆ ಮೇರೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಅವಲೋಕಿಸಿದರು. ನೀರಿನ ಟ್ಯಾಂಕಿಯಿಂದ ಬರುವ ಪೈಪ್ ತುಂಡಾಗಿರುವುದು ಮತ್ತು ಇಲ್ಲಿನ ಪಂಪ್ ಆಪರೇಟರ್ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಬಗ್ಗೆ ಸ್ಥಳೀಯರು ದೂರು ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಕೂಡಲೇ ಸಮಸ್ಯೆ

ಅಮರ ಮುಡ್ನೂರು ಗ್ರಾಮದ ಮುಂಡಕಜೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ತುರ್ತು ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು Read More »

error: Content is protected !!
Scroll to Top