ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದ್ದು ದಿನ ನಿತ್ಯ ದೇವರ ಉತ್ಸವದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನರಂಜಿಸುತ್ತಿದೆ.
ಏ.13ರಂದು ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ದೇವಳದ ವಠಾರದಲ್ಲಿ ನಡೆದ ವರ್ಣಪಲ್ಲಟ ಯಕ್ಷಗಾನ ಬಯಲಾಟ ಉತ್ತಮವಾಗಿ ಮೂಡಿ ಬಂದು ಯಕ್ಷಭಿಮಾನಿಗಳ ಮನಕುಣಿಸಿತು..ಏ.15ರಂದು ಕಲಾ ರತ್ನ ಪ್ರಶಸ್ತಿ ಪುರಸ್ಕೃತ ಅಪ್ಪು ಮೆಲೋಡಿಸ್ ಕುದ್ರೆಪಾಯ ಚೆಂಬು ಕೊಡಗು ವತಿಯಿಂದ ಭಕ್ತಿ ಗಾನ ವೈಭವ ನಡೆಯಿತು.
ಏ.16ರಂದು ಗಾನ-ನೃತ್ಯ ಅಕಾಡೆಮಿ ಸುಳ್ಯ ಇದರ
ಗುರು ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ವಿದುಷಿ ಮಂಜುಶ್ರೀ ರಾಘವ್ ಇವರ ಶಿಷ್ಠೆಯರಿಂದ ನ್ರತ್ಯ ಸಂಘಮ ಕಾರ್ಯಕ್ರಮ ನಡೆಯಿತ್ತಿದೆ.














































