April 2026

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ

ಪಾಡ್‌ಕಾಸ್ಟ್‌ ಒಂದರಲ್ಲಿ ಆಂಕರ್‌ ಅನುಶ್ರೀ ಮಾತಾಡಿದ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳನ್ನು ಅದರಲ್ಲೂ ಸೆಲೆಬ್ರಿಟಿ ಹೆಣ್ಣು ಮಕ್ಕಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಎಷ್ಟು ತುಚ್ಚವಾಗಿ ಕಾಮೆಂಟ್‌ ಮಾಡುತ್ತಾರೆ ಎಂಬುದನ್ನು ಅನುಶ್ರೀಯವರು ಹೇಳಿದ್ದರು. ಕೆಲವೊಂದು ಅನಾಗರಿಕ ಪದ ಬಳಕೆಗಳಿಂದ ಮನಸ್ಸಿಗಾಗುವ ಸಂಕಟವನ್ನು ವಿವರಿಸುತ್ತಾ ಫಿಸಿಕಲ್‌ ರೇಪ್‌ನಂತೆಯೇ ಮೆಂಟಲ್‌ ರೇಪ್‌ ಎಷ್ಟು ಕ್ರೂರವಾಗಿ ನಡೆಯುತ್ತಿದೆ ಎಂಬುದನ್ನು ಹೇಳಿದ್ದರು. ಅನುಶ್ರೀ ಹೇಳಿದ ಈ ಮಾತುಗಳು ಕೇವಲ ಅನುಶ್ರೀಗಷ್ಟೇ ಅಲ್ಲ, ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳಿಂದ ಹಿಡಿದು ಸಂಸ್ಕಾರವಂತ ಎಲ್ಲಾ […]

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ Read More »

ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ

ಪಂಜ ಸೀಮೆ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಷುಕಣಿ ಪೂಜೆ ಪೂರ್ವಹ್ನ ಜರುಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ವಿಷು ಕಣಿ ನೋಡಿ ಪ್ರಸಾದ ಸ್ವೀಕರಿಸಿದರು

ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ Read More »

ತೊಡಿಕಾನದಲ್ಲಿ ಮನರಂಜಿಸಿದ ನೂತನ‌ ಯಕ್ಷಗಾನ ಪ್ರಸಂಗ ವರ್ಣಪಲ್ಲಟ

ಸುಳ್ಯ ಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಏ.13ರಂದು ದೇವಳದ ವಠಾರದಲ್ಲಿ ನಡೆದ ವರ್ಣಪಲ್ಲಟ ಯಕ್ಷಗಾನ ಬಯಲಾಟ ಉತ್ತಮವಾಗಿ ಮೂಡಿ ಬಂದು ಯಕ್ಷಭಿಮಾನಿಗಳ ಮನರಂಜಿಸಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಯಕ್ಷಗಾನ ವೀಕ್ಷಿಸಿದರು.

ತೊಡಿಕಾನದಲ್ಲಿ ಮನರಂಜಿಸಿದ ನೂತನ‌ ಯಕ್ಷಗಾನ ಪ್ರಸಂಗ ವರ್ಣಪಲ್ಲಟ Read More »

ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಗುರಿ ತಾಲೂಕು ಭಜನಾ ಪರಿಷತ್ ಗೆ ಇದೆ : ಸೋಮಶೇಖರ ಪೈಕ

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ. ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಪಂಜ ಮತ್ತು ನಿಂತಿಕಲ್ಲು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಂಜ ವಲಯ ಇದರ ಆಶ್ರಯದಲ್ಲಿ17ನೇ ವರ್ಷದ ಭಜನಾ ತರಬೇತಿ ಪಂಜದ ಶಾರದಾಂಭಾ ವೇದಿಕೆಯಲ್ಲಿ ಏ.13ರಂದು ಉದ್ಘಾಟನೆಗೊಂಡಿದೆ.ಭಜನಾ ತರಬೇತಿಯನ್ನು ಒಡಿಯೂರು ಶ್ರೀ ಕ್ಷೇತ್ರ ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು‌.

ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಗುರಿ ತಾಲೂಕು ಭಜನಾ ಪರಿಷತ್ ಗೆ ಇದೆ : ಸೋಮಶೇಖರ ಪೈಕ Read More »

ಸುಳ್ಯ: ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ರವರು ಸಾಮಾಜಿಕ ಶೋಷಿತವರ್ಗದ ಧ್ವನಿಯಾಗಿ, ತಮ್ಮ ಅಪಾರ ಬುದ್ದಿಮತ್ತೆಯಿಂದ ಸಂವಿಧಾನ ರಚನೆ ಮಾಡಿ

ಸುಳ್ಯ: ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಬಾವಿಗೆ ಬಿದ್ದ ಕಾಡಾನೆ ಹೇಗೆ ಕಾಡು ಸೇರಿತು ಇಲ್ಲಿದೆ ಮಾಹಿತಿ

ಆಲೆಟ್ಟಿ ಗ್ರಾಮದ ಕಲ್ಚರ್ಪೆ ಎಂಬಲ್ಲಿ ಆನೆಯೊಂದು ಏ.12ರಂದು ಬಾವಿಗೆ ತಡರಾತ್ರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಗಿದೆ.ಕಲ್ಚರ್ಪೆಯ ದಮಯಂತಿ ಎಂಬವರ ಮನೆಯ ಸಮೀಪದ ತೋಟದ ಬಳಿ ಪಾಳು ಬಿದ್ದ ಬಾವಿಯಿದ್ದು, ಅದರ ನೀರು ಬೇಸಿಗೆಯಲ್ಲಿ ಬತ್ತುತ್ತದೆ.ಆಹಾರ ಅರಸಿ ತೋಟದ ಕಡೆಗೆ ಬಂದಿದ್ದ ಆನೆಯ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಸುಮಾರು 20 ವರ್ಷದ ಕಾಡಾನೆಯೊಂದು ಬಾವಿಯೊಳಗೆ ಬಿದ್ದಿದೆ ಎಂದು ಸ್ಥಳಿಯರು ತಿಳಿಸಿದ್ದರು.ಅರಣ್ಯ ಇಲಾಖೆಯವರು ಹಿಟಾಚಿ ಯಂತ್ರವನ್ನು ತರಿಸಿ ಬಾವಿಯಿಂದ ಆನೆ ಮೇಲಕ್ಕೆ ಬರಲು

ಬಾವಿಗೆ ಬಿದ್ದ ಕಾಡಾನೆ ಹೇಗೆ ಕಾಡು ಸೇರಿತು ಇಲ್ಲಿದೆ ಮಾಹಿತಿ Read More »

ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮಹೂರ್ತ

ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮಹೂರ್ತ ಕಾರ್ಯಕ್ರಮವು ಎ. 13 ರಂದು ನಡೆಯಿತು.ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುಂದರ್ ರಾವ್‌,ಕಾರ್ಯಾಧ್ಯಕ್ಷರಾದ ದೇವಿಪ್ರಸಾದ್ ಕೆ ಎಸ್, ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಲ, ಕೋಶಾಧಿಕಾರಿ ಕೇಶವ ಮಾಸ್ತರ್, ಸಹ ಸಂಚಾಲಕರಾದ ನಾರಾಯಣ ಎಸ್ ಎಂ, ಗೌರವ ಸಲಹೆಗಾರರಾದ ಬಾಲಗೋಪಾಲ ಸೇರ್ಕಜೆ, ಶ್ರೀನಿವಾಸ್ ರಾವ್ ಹಳೆ ಗೇಟು, ಆನಂದ ಬೆಟ್ಟಂಪಾಡಿ, ಚಂದ್ರಶೇಖರ ಎ. ಕಾರ್ಯದರ್ಶಿ ರಾಘವ ಪೆರಾಜೆ, ಜಗದೀಶ್ ಎನ್. ಆರ್,

ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗೊನೆ ಮಹೂರ್ತ Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ವಿಷು ಸಂಭ್ರಮ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಫರ್

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ ವಿಷು ಹಬ್ಬ ಪ್ರಯುಕ್ತ ವಿಷು ಹಬ್ಬ ಸಂಭ್ರಮ ಹಾಗೂ ಅಕ್ಷಯ ತೃತೀಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಫರ್ ನೀಡಲಾಗುತ್ತಿದೆ.ಸ್ವರ್ಣಂ ಜ್ಯುವೆಲ್ಸ್ ಮಳಿಗೆಯ ಗ್ರಾಹಕರಿಗೆ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ವಿಷು ಹಬ್ಬದ ಸಂಭ್ರಮ ಹಾಗೂ ಅಕ್ಷಯ ತೃತೀಯ ಆಫರ್ ಆಯೋಜನೆಗೊಂಡಿದೆ. ಅಲ್ಲದೆ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತೀ ಚಿನ್ನಾಭರಣಗಳ ಪ್ರತೀ ಪವನಿಗೆ 3000 ಕಡಿತ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ವಿಷು ಸಂಭ್ರಮ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಫರ್ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ವೈಭದ ಧ್ವಜಾರೋಹಣ ಮೂಲಕ ಚಾಲನೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಯಿತು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಣ ಸಂತೋಷ್ ಕುತ್ತಮೊಟ್ಟೆ,ದೇವಳದ ಇ.ಒ ಅವಿನ್ ರಂಗತ್ ಮಲೆ, ಹಸಿರುವಾಣಿ ಸಮಿತಿ ಅಧ್ಯಕ್ಷ ಕೇಶವ ಅಡ್ತಲೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯದ ಯೋಜನಾಧಿಕಾರಿ ಮಾದವ ಗೌಡ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕ್ರಷ್ಣ

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ವೈಭದ ಧ್ವಜಾರೋಹಣ ಮೂಲಕ ಚಾಲನೆ Read More »

ತೊಡಿಕಾನ : ಜಾತ್ರೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದೆ‌.ಈ ದಿನ ಕೇರಳ ಚೆಂಡೆವಾದನ,ಕುಣಿತ ಭಜನೆ,ಯಕ್ಷಗಾನ ವೇಷಗಳೊಂದಿಗೆ ಅದ್ದೂರಿ ಹಸಿರು ವಾಣಿ ಮೆರವಣಿಗೆ ನಡೆಯಿತು.ಅರಂತೋಡು ತೋಟಂಪ್ಪಾಡಿ ಉಳ್ಳಾಕುಲು ಉಳ್ಳಾಕ್ಲು ದೈವದ ಭಂಡಾರ ಆಗಮಿಸಿದ ಬಳಿಕ ದೇವರ ಜಳಕದ ಗುಂಡಿ ಸಮೀಪ ರಾಜರಾಮ್ ಕೀಲಾರು ಅವರು ಹಸಿರುವಾಣಿ ಮೆರವಣಿಗೆಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ

ತೊಡಿಕಾನ : ಜಾತ್ರೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ Read More »

error: Content is protected !!
Scroll to Top