ಇವತ್ತು ಅಡುಗೆ ಅನಿಲದ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಹೋಟೆಲುಗಳಲ್ಲಿ ಚಾ ತಿಂಡಿಗಳ ಬೆಲೆ ಏರಿಕೆಯಾಗಿದೆ.ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಇತರ ವಸ್ತುಗಳ ಬೆಲೆ ಏರುತ್ತಿದೆ.ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದಿನದಿಂದದಿನಕ್ಕೆ ಬೆಲೆ ಏರಿಕೆ ಮಾಡಿ ಜನರಿಗೆ ಅರ್ಥಿಕ ಹೊರೆ ಹೊರಿಸುತ್ತಿದೆ.
ಜನರು ಉಗ್ರವಾಗಿ ಇದನ್ನು ಪ್ರತಿಭಟಿಸಬೇಕು.
ತಪ್ಪಿದ್ದಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಲಿದೆ” ಇದರಿಂದ ಬಡವರಿಗೆ ಉಳಿಗಾಲವಿಲ್ಲ ಎಂದು ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ಹೇಳಿದ್ದಾರೆ.
ಸುಳ್ಯ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರು ಬಡವರು ಜೀವನ ನಡೆಸುವುದು ಕಷ್ಟವಾಗುತ್ತಿದೆ ಕೇಂದ್ರ ಸರಕಾರದ ವಿರುದ್ಧ ಜನರು ಬೀದಿಗೆ ಇಳಿದು ಹೋರಾಟ ಮಾಡಬೇಕೆಂದು ಅವರು ಹೇಳಿದರು.
ಗುತ್ತಿಗಾರು ಗ್ರಾ.ಪಂ. ಮಾಜಿ ಸದಸ್ಯ ದಿನೇಶ್ ಸರಸ್ವತಿ ಮಹಲ್ ಮಾತನಾಡಿ, ಜನರ ಭಾವನೆಗಳನ್ನು ಕೆರಳಿಸಿ ಹಿಂದುತ್ವ ನಮ್ಮ ಮೂಲ ಉದ್ದೇಶ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಇಂದು ಬಡವರಿಗೆ ಕಷ್ಟ ಕೊಡುತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಇದ್ದಾಗ ಬೆಲೆ ಕಡಿಮೆ ಇತ್ತು. ಬೆಲೆ ಏರಿಸುತ್ತಿರುವ ಈಗಿನ ಕೇಂದ್ರ ಸರಕಾರದ ವಿರುದ್ಧ ಜನರು ಪ್ರತಿಭಟಿಸಬೇಕು. ಕಾಂಗ್ರೆಸ್ ಪಕ್ಷ ಎಲ್ಲರನ್ನು ಸೇರಿಸಿಕೊಂಡು ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಕೆ.ಡಿ.ಪಿ. ಸಮಿತಿ ಸದಸ್ಯ ಪರಮೇಶ್ವರ ಕೆಂಬಾರೆ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರವಿ ಗುಂಡಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಆಗಾಗ ಡಿಸೇಲ್ ಪೆಟ್ರೋಲ್ ಬೆಲೆ ಏರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡದಿದ್ದರೆ ಬಡವರಿಗೆ ಉಳಿಗಾಲವಿಲ್ಲ : ಪರಶುರಾಮ ಚಿಲ್ತಡ್ಕ






















































