ವಿವಿಧ ಬೇಡಿಕೆಗಳನ್ನು ಇಡೇರುಸುವಂತೆ ಅರಣ್ಯ ಸಚಿವರಿಗೆ ಸುಳ್ಯ ಶಾಸಕರಿಂದ ಮನವಿ

ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಆಗಮಿಸಿದ ಅರಣ್ಯ ಮತ್ತು ಪರಿಸರಜೀವಶಾಸ್ತ್ರ ಸಚಿವರಾದ ಈಶ್ವರ ಖಂಡ್ರೆ ಅವನ್ನು ಶಾಸಕರು ಸುಳ್ಯವಿಧಾನ‌ಸಭಾ ಕ್ಷೇತ್ರಕ್ಕೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸಚಿವರಿಗೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ಈಗಾಗಲೇ ಸಲ್ಲಿಸಲಾಗಿರುವ ಕಡಮಕಲ್ಲು-ಗಾಳಿಬೀಡು-ಮಡಿಕೇರಿ ರಸ್ತೆ ಮತ್ತು ತೋಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಬೇಕಾದ ಸಹಕಾರ ನೀಡಬೇಕು‌.
ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆಯ ವರದಿಗಳನ್ನು ಶೀಘ್ರವಾಗಿ ಪ್ರಕಟಿಸಬೇಕು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸದೆ ಸದರಿ ಜಾಗದಲ್ಲಿ ವಾಸಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಹಕ್ಕುಪತ್ರವನ್ನು ಒದಗಿಸಬೇಕು.
ಕೃಷಿಕರ ತೋಟಗಳಿಗೆ ಇಲಾಖೆಯ ಅನುದಾನ ಸೋಲಾರ್ ಬೇಲಿ ನಿರ್ಮಾಣಕ್ಕೆ ಪ್ರಸ್ತುತ ಒದಗಿಸುವ ಶೇಕಡ 50/50 ಅನುದಾನದ ಬದಲಿಗೆ 75/25ಅನುದಾನವನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.
ಕೃಷಿ ತೋಟಗಳಿ ಹಾನಿಯಾದ ಪರಿಹಾರ ಮೊತ್ತವನ್ನು ಹೆಚ್ಚಿಸಿ ಅದಷ್ಟು ಬೇಗ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತರಿಗೆ ನೇರವಾಗುವಂತೆ ಮನವಿಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಕೇಂದ್ರಿಯ ರಬ್ಬರ್ ಮಂಡಳಿಯ ನಿರ್ದೇಶಕರಾದ ಕೇಶವ ಭಟ್ ಮುಳಿಯ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಆಶೋಕ ನೆಕ್ರಾಜೆ, ಆಭಾಜಪ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ,ಗುತ್ತಿಗಾರು ಪಂಚಾಯತ್ ಮಾಜಿ ಸದಸ್ಯ ರಾಕೇಶ ಮೆಟ್ಟಿನಡ್ಕ, ದೇವಾಲಯದ ಉಪಸ್ಥಿತರಿದ್ದರು.







































































































Leave a Comment

Your email address will not be published. Required fields are marked *

error: Content is protected !!
Scroll to Top