May 2026

ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆ ಸಲಭದ ಮಾರ್ಗ : ಡಾ.ಹರಪ್ರಸಾದ್ ತುದಿಯಡ್ಕ

ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆ ಸಲಭದ ಮಾರ್ಗ ಎಂದು ಸುಳ್ಯ ಚೆನ್ನಕೇಶವ ದೇವಳದ ಅನುವಂಶಿಕ ಮೊಕ್ತೇಸರ ಡಾ. ಡಾ.ಹರಪ್ರಸಾದ್ ತುದಿಯಡ್ಕ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ,ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿ ಒಂದು ವಾರಗಳ ಕಾಲ ನಡೆದ ಭಜನಾ ತರಬೇತಿ ಹಾಗೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ […]

ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆ ಸಲಭದ ಮಾರ್ಗ : ಡಾ.ಹರಪ್ರಸಾದ್ ತುದಿಯಡ್ಕ Read More »

ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್ ದಾಳಿ,ಮೂವರ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವಪವನ್ ಕ್ಯಾಂಟೀನ್’ ಮೇಲೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿ ಯುವತಿಯೊಬ್ಬರನ್ನು ರಕ್ಷಿಸಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕ್ಯಾಂಟೀನ್ ಮಾಲಕ ಸುಂದರ್ ಶೆಟ್ಟಿ ಹಾಗೂ ಗಿರಾಕಿಗಳಾದ ಉಸ್ಮಾನ್, ಹೈದರ್ ಎಂಬವರನ್ನು ಬಂಧಿಸಲಾಗಿದೆ.ಪವನ್‌ ಕ್ಯಾಂಟೀನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. 29 ವರ್ಷದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿ, 5 ಸಾವಿರ

ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ, ಪೊಲೀಸ್ ದಾಳಿ,ಮೂವರ ಮೇಲೆ ಪ್ರಕರಣ ದಾಖಲು Read More »

ಮಂಡೆಕೋಲು ಗ್ರಂಥಾಲಯದಲ್ಲಿ 1೦ ದಿನಗಳ ಬೇಸಿಗೆ ಶಿಬಿರ “ಮಕ್ಕಳ ಜ್ಞಾನಹಬ್ಬ” ಆರಂಭ

ನಿರಂತರ ಚಟುವಟಿಕೆಗಳಿಂದ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಮಂಡೆಕೋಲು ಗ್ರಾಮಪಂಚಾಯತ್ ಗ್ರಂಥಾಲಯದಲ್ಲಿ 1೦ ದಿನಗಳ ಬೇಸಿಗೆ ಶಿಬಿರ *ಗ್ರಂಥಾಲಯದ ಅಂಗಳದಲ್ಲಿ ಮಕ್ಕಳ ಜ್ಞಾನಹಬ್ಬ* ಆರಂಭಗೊಂಡಿದೆ.ಶಿಬಿರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಾಜಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮಂಡಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ‌ ಸುರೇಶ್‌ ಕಣೆಮರಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ, ಸಂಪನ್ಮೂಲ ವ್ಯಕ್ತಿಯಾದ ರಂಗ ಕಲಾವಿದ ಸುಬ್ಬು ಸಂಟ್ಯಾರ್, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು.   ಆರಂಭದ

ಮಂಡೆಕೋಲು ಗ್ರಂಥಾಲಯದಲ್ಲಿ 1೦ ದಿನಗಳ ಬೇಸಿಗೆ ಶಿಬಿರ “ಮಕ್ಕಳ ಜ್ಞಾನಹಬ್ಬ” ಆರಂಭ Read More »

ಅಜ್ಜಾವರ : ಮೇ.13 ಮತ್ತು 14ರಂದು ಮಹೀಷಮರ್ದಿನಿ ದೇವಾಲಯದಲ್ಲಿ ಶ್ರೀ ಮಾತಾ ಸಭಾಭವನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮ

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಶ್ರೀ ಮಹೀಷಮರ್ದಿನಿ ದೇವಾಲಯದಲ್ಲಿ ಶ್ರೀ ಮಾತಾ ಸಭಾಭವನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮ ಮೇ.13 ಮತ್ತು 14ರಂದು ನಡೆಯಲಿದೆ.ಮೆ.13ರಂದು ಸಂಜೆ 6 ಗಂಟೆಗೆ ಜಗದ್ಗುರುಗಳ ಆಗಮನವಾಗಿ ಗ್ರಾಮ ಪಂಚಾಯತ್ ಬಳಿಯಿಂದ ವೇದಘೋಷ, ಕುಣಿತ ಭಜನೆ, ಬ್ಯಾಂಡ್ ಸೆಟ್ ವಾಲಗಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯಲಿದೆ‌. ಸಾಯಂಕಾಲ 7:0೦ ಕ್ಕೆ ಧೂಳೀ ಪಾದಪೂಜೆ, ರಾತ್ರಿ 8:00ರಿಂದ ದೇವರನಾಮಗಳು, ರಾತ್ರಿ 8:30ರಿಂದ ಶ್ರೀ ಮಜ್ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.ಮೇ .14ರಂದುಬೆಳಿಗ್ಗೆ

ಅಜ್ಜಾವರ : ಮೇ.13 ಮತ್ತು 14ರಂದು ಮಹೀಷಮರ್ದಿನಿ ದೇವಾಲಯದಲ್ಲಿ ಶ್ರೀ ಮಾತಾ ಸಭಾಭವನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮ Read More »

ಕನಕಮಜಲು : ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರಿಗೆ ಗಾಯ

ಸುಳ್ಯ ತಾಲೂಕಿನ ಕನಕಮಜಲು ಸಮೀಪ ಕಾರೊಂದು ಒಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೇ 8 ರಂದು ವರದಿಯಾಗಿದೆ.ಸುಳ್ಯ ಕಡೆಯಿಂದ ಪುತ್ತೂರು ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದು,ಘಟನೆಯಿಂದ ಕಾರಿನಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಸೇರಿ ನಾಲ್ವರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.ಕಾರಿನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆಯುವಲ್ಲಿ ಸ್ಥಳೀಯರಾದ

ಕನಕಮಜಲು : ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ವರು ಪ್ರಯಾಣಿಕರಿಗೆ ಗಾಯ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ನೇಮಿರಾಜ ಪಲ್ಲೋಡಿಯವರಿಗೆ ಸನ್ಮಾನ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೇಮಿರಾಜ ಪಲ್ಲೋಡಿಯವರಿಗೆ ಸನ್ಮಾನ ಕಾರ್ಯಕ್ರಮ ಮೇ.9 ರಂದು ದೇಗುಲದ ಸಭಾಭವನದಲ್ಲಿ ನಡೆಯಿತು.ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ರವರು ನೇಮಿರಾಜ ಪಲ್ಲೋಡಿ ಮತ್ತು ಅವರ ಪತ್ನಿ ಶ್ರೀಮತಿ ಕವಿತಾ ನೇಮಿರಾಜ ಪಲ್ಲೋಡಿ ಅವರನ್ನು ಸನ್ಮಾನಿಸಿದರು. ವ್ಯವಸ್ಥಾಪನಾ ಸಮಿತಿಯ ಗೌರವ ಸಲಹೆಗಾರರಾದ ಪರಮೇಶ್ವರ ಬಿಳಿಮಲೆ,

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವತಿಯಿಂದ ನೇಮಿರಾಜ ಪಲ್ಲೋಡಿಯವರಿಗೆ ಸನ್ಮಾನ Read More »

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ವಿಭಾಗಕ್ಕೆ 05 ರ‍್ಯಾಂಕ್

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು, ಇವರು ಮಾರ್ಚ್ 2026ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ. /ಎಂ.ಎಸ್ಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರ ವಿಭಾಗದ 05 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದು,ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ಭಾಗ್ಯವತಿ ಎಸ್., ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.ರಸಶಾಸ್ತ್ರ ಬೈಷಜ್ಯ ಕಲ್ಪನಾ ವಿಭಾಗ ಮುಖ್ಯಸ್ಥರಾದ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ವಿಭಾಗಕ್ಕೆ 05 ರ‍್ಯಾಂಕ್ Read More »

ತೊಡಿಕಾನ : ಅಕ್ರಮ ಮರಳು ಸಂಗ್ರಹ ಪತ್ತೆ,ಪೊಲೀಸ್ ದಾಳಿ

,ತೊಡಿಕಾನ ಗ್ರಾಮದ ಶೆಟ್ಟಿಯಡ್ಕ ಎಂಬಲ್ಲಿ ತೋಟ ಒಂದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರು ದಾಳಿ ನಡೆಸಿ ಸುಮಾರು 1.20 ಲಕ್ಷ ರೂಪಾಯಿ ಮೌಲ್ಯದ ಮರಳನ್ನು ವಸಪಡಿಸಿಕೊಂಡು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಘಟನೆ ವರದಿಯಾಗಿದೆ.ಪೆರಾಜೆ ಗ್ರಾಮದ ಮನು ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರ ಮೇಲೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೇ.8 ರಂದು ಮಧ್ಯಾಹ್ನ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ. ರವರ ನೇತೃತ್ವದ ತಂಡ ದಾಳಿ

ತೊಡಿಕಾನ : ಅಕ್ರಮ ಮರಳು ಸಂಗ್ರಹ ಪತ್ತೆ,ಪೊಲೀಸ್ ದಾಳಿ Read More »

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ಸ್ವೀಕಾರ

ಪಶ್ಚಿಮ ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅವರು ಶನಿವಾರ (ಮೇ 09) ಪ್ರಮಾಣ ವಚನ ಸ್ವೀಕರಿಸಿದರು. ಕೋಲ್ಕತ್ತಾದ ಬ್ರಿಗೇಡ್ ಪರೇಡ್‌ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾರಿಂದ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕರಿದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೇರಿದಂತೆ ಹಿರಿಯ ಎನ್ ಡಿಎ ನಾಯಕರು ಆಗಮಿಸಿದ್ದರು. ಹಲವಾರು ಕೇಂದ್ರ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ಸ್ವೀಕಾರ Read More »

ಬಂಟ್ವಾಳದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ – 2026 ಕಾರ್ಯಕ್ರಮ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಕರಾವಳಿ ಕಲೋತ್ಸವ ಕಾರ್ಯಕ್ರಮದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ – 2026 ಮೇ.6ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಅರೆಭಾಷೆ ಸಾಂಸ್ಕೃತಿಕ ಸಂಭ್ರಮ -2026 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ ಉಮೇಶ್ ಕುಮಾ‌ರ್ ವೈ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬಿ.ಸಿ. ರೋಡಿನ ವಕೀಲರಾದ ಅಶ್ವನಿ ಕುಮಾ‌ರ್ ರೈ, ಪುತ್ತೂರು ಒಕ್ಕಲಿಗರ

ಬಂಟ್ವಾಳದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ – 2026 ಕಾರ್ಯಕ್ರಮ Read More »

error: Content is protected !!
Scroll to Top