May 2026

ಕಡಬ : ನೀರಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಯುವತಿಯರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,ಓದಿ

ಕಡಬ : ಸ್ನಾನಕ್ಕೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನ‌ ಸೆಳತಕ್ಕೆ ಸಿಲುಕಿ ಮೃತಪಟ್ಟ ಘಟನೆ ಕಡಬದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಅರ್ಪಿತಾ (15) ಮತ್ತು ಸುನೀತಾ (21) ಎಂದು ಗುರುತಿಸಲಾಗಿದೆ. ಈ ಕುರಿತು ಮೃತ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇ 8ರಂದು ಮಧ್ಯಾಹ್ನ ಅರ್ಪಿತಾ, ಸುನೀತಾ, ಅಕ್ಷತಾ ಹಾಗೂ ನೆಟ್ಟಣದ ಶ್ರೇಯಾ ಸೇರಿದಂತೆ ಗೆಳೆಯರ ಬಳಗವು […]

ಕಡಬ : ನೀರಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಯುವತಿಯರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,ಓದಿ Read More »

ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ

ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.ಬಿಜೆಪಿ ವೀಕ್ಷಕರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಸುವೇಂದುಅಧಿಕಾರಿ ಅವರನ್ನು ಮುಖ್ಯಮಂತ್ರಿಯಾಗಿ ಅಯ್ಕೆ ಮಾಡಲಾಗಿದ್ದು, ನಾಳೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.ಸುವೇಂದು ಅಧಿಕಾರಿ ಜೊತೆ ಸುಮಿತ್ ಭಟ್ಟಾಚಾರ್ಯ,

ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ Read More »

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ದಿನಾಚರಣೆ

ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ 8ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಯಿತು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು “ಸ್ವಚ್ಛತೆ – ಆರೋಗ್ಯ- ರಕ್ಷಣೆ- ಬದುಕು” ಎಂಬ ಶೀರ್ಷಿಕೆಯಡಿಯಲ್ಲಿ  ಮಾಹಿತಿ ಹಾಗೂ ಗೌರವಾರ್ಪಣೆ ಕಾರ್ಯಕ್ರಮದೊಂದಿಗೆ ನಡೆಸಲಾಯಿತು.ಕಾಲೇಜಿನ ರಕ್ಷಣಾ ಹಾಗೂ ಸ್ವಚ್ಛತಾ   ಸಿಬ್ಬಂದಿಗಳಾದ ಭಾಗ್ಯನಂದ ಎಂ.ಆರ್, ಸೀತಾರಾಮ ರಾವ್ ಕೆ,

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ದಿನಾಚರಣೆ Read More »

ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಸಾವು

ಕಡಬ ತಾಲೂಕಿನ ಡ್ಯಾಂ ಬಳಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿನಿಯರು ಮುಳುಗಿ ಮೃತಪಟ್ಟ ಘಟನೆ ಮೇ.8ರಂದು ವರದಿಯಾಗಿದೆ.ಗುಂಡ್ಯ ಹೊಳೆಯ ಕೊಲ್ಯದಕಟ್ಟ ಡ್ಯಾಂ ಬಳಿ ಘಟನೆ ನಡೆದಿದ್ದುಕುಟ್ರುಪ್ಪಾಡಿಯ ಅರ್ಪಿತಾ(15), ಸುನೀತಾ (21) ಮೃತರು ಎಂದು ಗರುತಿಸಲಾಗಿದೆ ಹೆಚ್ಚಿ ಮಾಹಿತಿ ತಿಳಿದು ಬರಬೇಕಾಗಿದೆ.

ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಸಾವು Read More »

ಇಂದಿನಿಂದ ಸುಳ್ಯದ ಚಿತ್ರಮಂದಿರದಲ್ಲಿ ಭಾವ ತೀರ ಯಾನ ಚಲನಚಿತ್ರ ಪ್ರದರ್ಶನ ಆರಂಭ

ಆರೋಹ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿರುವ, ಮಯೂರ್ ಅಂಜಿಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಸಿನಿಮಾ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಚಲನಚಿತ್ರ ಹೊರತಂದಿರುವುದು ಒಂದು ಸಾಧನೆ ಎಂದು ಎಂ.ಬಿ.ಪೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇ.8 ರಂದು ಸುಳ್ಯದಲ್ಲಿ ಮರುತೆರೆ ಕಾಣಲಿರುವ ಭಾವತೀರ ಯಾನ ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ಸಾರುವ

ಇಂದಿನಿಂದ ಸುಳ್ಯದ ಚಿತ್ರಮಂದಿರದಲ್ಲಿ ಭಾವ ತೀರ ಯಾನ ಚಲನಚಿತ್ರ ಪ್ರದರ್ಶನ ಆರಂಭ Read More »

ಮಡಿಕೇರಿ ಮಂಗಳೂರು‌ ರಸ್ತೆಯಲ್ಲಿ ಬಸ್ಸು ಚಾಲಕನಿಗೆ ಹೃದಯಘಾತವಾಗಿ ಬರೆಗೆ ಗುದ್ದಿದ ಬಸ್ಸು ,ಚಾಲಕ ಸಾವು,ಪ್ರಯಾಣಿಕರು ಪಾರು

ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ಚಾಲಕ ಹ್ರದಯಘಾತದಿಂದ ಸಾವನ್ನಪ್ಪಿದ ಮೇ.8ರಂದು ಮುಂಜಾನೆ ಮಡಿಕೇರಿ ಬಳಿಯ ಕಾಟಿಗೇರಿಯಿಂದ ವರದಿಯಾಗಿದೆ.ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪೂರ್ಣಿಮ ಬಸ್ ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿತು. ಇಂದು ಮುಂಜಾನೆ ಮಡಿಕೇರಿ ದಾಟಿ ಬರುತ್ತಿರುವಾಗ ಕಾಟಿಕೇರಿ ಬಳಿ ತಿರುವಿನಲ್ಲಿ ಬಸ್ ಚಾಲಕ ಶಿವಕುಮಾರ್ ಹೃದಯಾಘಾತಕ್ಕೊಳಗಾಗಿ ಬಸ್ ನಿಯಂತ್ರಣ ತಪ್ಪಿ

ಮಡಿಕೇರಿ ಮಂಗಳೂರು‌ ರಸ್ತೆಯಲ್ಲಿ ಬಸ್ಸು ಚಾಲಕನಿಗೆ ಹೃದಯಘಾತವಾಗಿ ಬರೆಗೆ ಗುದ್ದಿದ ಬಸ್ಸು ,ಚಾಲಕ ಸಾವು,ಪ್ರಯಾಣಿಕರು ಪಾರು Read More »

ಕಲ್ಲುಗುಂಡಿ : ಹಿರಿಯ ಯಕ್ಷಗಾನ ಕಲಾವಿದ ಪಕೀರಪ್ಪ ಪೂಜಾರಿ ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಚೆಟ್ಟಕಲ್ಲು ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ, ಪಕೀರಪ್ಪ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ. 7 ರಂದು ನಿಧನರಾದರು.ಮೃತರು ಪುತ್ರರಾದ ರಾಮಕೃಷ್ಣ, ತೇಜಪ್ರಕಾಶ್, ಚಂದ್ರಶೇಖ‌ರ್, ಪುತ್ರಿಯನ್ನು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಲ್ಲುಗುಂಡಿ : ಹಿರಿಯ ಯಕ್ಷಗಾನ ಕಲಾವಿದ ಪಕೀರಪ್ಪ ಪೂಜಾರಿ ನಿಧನ Read More »

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌!

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ಮೇ 6ರಿಂದ 12ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಉತ್ತರ ತೆಲಂಗಾಣದಿಂದ ಮನ್ನಾರ್ ಕೊಲ್ಲಿವರೆಗೆ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ವಾತಾವರಣ ನಿರ್ಮಾಣವಾಗಿದೆ. ಮೇ 7 ಮತ್ತು 8ರಂದು ಹಾಸನ, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಸಾಧಾರಣದಿಂದ

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌! Read More »

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದು ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರ ವಿರುದ್ಧ ನಡೆದಿದ್ದ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಹಿಂದೆ, ಭಾರತದ ಭದ್ರತೆಗೆ ಸವಾಲಾಗಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುವ ಶಕ್ತಿಗಳನ್ನು ಭಾರತೀಯ ಸೇನೆ ಹುಡುಕಿ ಶಿಕ್ಷಿಸುತ್ತದೆ ಎಂಬಸಂದೇಶವನ್ನು ಈ ವೀಡಿಯೊ ನೀಡಿದೆ.

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ Read More »

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ

ಚೆಂಬು ಗ್ರಾಮದ ಶ್ರೀ ಮಾಡ ದೇವಸ್ಥಾನ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ 6 ರಂದು ನಡೆಯಿತು.ಉಳ್ಳಾಕುಲು ದೈವದ ಕುದುರೆ ಬಂಡಿ ಉತ್ಸವ, ಬಳಿಕ ಉಳ್ಳಾಕುಲು ದೈವದ ಪಗ್ಗು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ದೈವಸ್ಥಾನದ ಸಮಿತಿಯವರು ಊರ – ಪರವೂರ ಭಕ್ತಾಧಿಗಳು ಆಗಮಿಸಿ ದೈವದ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು..

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ Read More »

error: Content is protected !!
Scroll to Top