ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು, ಇವರು ಮಾರ್ಚ್ 2026ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ. /ಎಂ.ಎಸ್ಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರ ವಿಭಾಗದ 05 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದು,
ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ಭಾಗ್ಯವತಿ ಎಸ್., ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ರಸಶಾಸ್ತ್ರ ಬೈಷಜ್ಯ ಕಲ್ಪನಾ ವಿಭಾಗ ಮುಖ್ಯಸ್ಥರಾದ ಡಾ. ಪುರುಷೋತ್ತಮ ಕೆ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ಭೂಮಿಕಾ ಕೆ ಐದನೇ ರ‍್ಯಾಂಕ್‌ನ್ನು,
ಅಗದ ತಂತ್ರ ವಿಭಾಗ ಮುಖ್ಯಸ್ಥರಾದ ಡಾ.ಅವಿನಾಶ್ ಕೆ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ರೋಹಿತ್ ಕೆ. ಆರ್. ಮೂರನೇ ರ‍್ಯಾಂಕ್ ಹಾಗೂ ಡಾ. ಶ್ರೇಯಾ ಸಚಿನ್ ಚೌಗುಲೆ ಒಂಭತ್ತನೇ ರ‍್ಯಾಂಕ್‌ನ್ನು,
ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಭಾಗ್ಯೇಶ್ ಕೆ. ರವರ ಮಾರ್ಗದರ್ಶನದಲ್ಲಿ ಡಾ. ಪ್ರತಿಭಾ ವೈ. ಚಕ್ರಸಾಲಿ ಆರ್., ಏಳನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ.
ವಿಭಾಗದ ಮುಖ್ಯಸ್ಥರುಗಳನ್ನು, ಪ್ರಾಧ್ಯಾಪಕರುಗಳನ್ನು ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ. ಶೋಭ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಶ್ರೀ ಕೆ. ವಿ., ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌಂನ್ಸಿಲ್ ಮೆಂಬರ್ಸ್ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಯವರು ಅಭಿನಂದಿಸಿದ್ದಾರೆ.





















































