ಅಜ್ಜಾವರ : ಮೇ.13 ಮತ್ತು 14ರಂದು ಮಹೀಷಮರ್ದಿನಿ ದೇವಾಲಯದಲ್ಲಿ ಶ್ರೀ ಮಾತಾ ಸಭಾಭವನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮ

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಶ್ರೀ ಮಹೀಷಮರ್ದಿನಿ ದೇವಾಲಯದಲ್ಲಿ ಶ್ರೀ ಮಾತಾ ಸಭಾಭವನ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮ ಮೇ.13 ಮತ್ತು 14ರಂದು ನಡೆಯಲಿದೆ.ಮೆ.13ರಂದು ಸಂಜೆ 6 ಗಂಟೆಗೆ ಜಗದ್ಗುರುಗಳ ಆಗಮನವಾಗಿ ಗ್ರಾಮ ಪಂಚಾಯತ್ ಬಳಿಯಿಂದ ವೇದಘೋಷ, ಕುಣಿತ ಭಜನೆ, ಬ್ಯಾಂಡ್ ಸೆಟ್ ವಾಲಗಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯಲಿದೆ‌. ಸಾಯಂಕಾಲ 7:0೦ ಕ್ಕೆ ಧೂಳೀ ಪಾದಪೂಜೆ, ರಾತ್ರಿ 8:00ರಿಂದ ದೇವರನಾಮಗಳು, ರಾತ್ರಿ 8:30ರಿಂದ ಶ್ರೀ ಮಜ್ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.ಮೇ .14ರಂದು
ಬೆಳಿಗ್ಗೆ 7 ಗಂಟೆಗೆ ಸಭಾಭವನದಲ್ಲಿ‌ ಗಣಪತಿ ಹೋಮ‌ ನಡೆಯಲಿದೆ.9.30ರಿಂದ ಶ್ರೀ ಜಗದ್ಗುರುಗಳಿಂದ ಪ್ರಸನ್ನ ಪೂಜೆ,
ಬೆಳಿಗ್ಗೆ 10:30 : ದೀಪಪ್ರಜ್ವಲನೆ, ಶ್ರೀ ಮಾತಾ ಸಭಾವನ ಉದ್ಘಾಟನೆ, 11:00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು‌ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ಘನ ಸರ್ಕಾರದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ,
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲಾಣ ಸಚಿವರಾದ ದಿನೇಶ್ ಗುಂಡೂರಾವ್,ಸಂಸದ ಕ್ಯಾಪ್ಟನ್ ಬ್ರೀಜೇಶ್ ಚೌಟ,
ಶಾಸಕಿ ಭಾಗೀರಥಿ ಮುರುಳ್ಯ,ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ವೇದಿಕೆಯಲ್ಲಿ ಉಪಸ್ಥಿತರಿರುವರು.



































































































Leave a Comment

Your email address will not be published. Required fields are marked *

error: Content is protected !!
Scroll to Top