May 2026

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು

ಪೆರಾಜೆ ಗ್ರಾಮದ ಹೊದ್ದೆಟ್ಟಿ ಎಂಬಲ್ಲಿ ಜಗದೀಶ್ ಎಂಬುವವರು ಕಣಜದ ಹುಳು ಕಡಿದು ಸಾವನ್ನಪ್ಪಿದ ಘಟನೆ ಮೇ 19ರಂದು ವರದಿಯಾಗಿದೆ.ತಮ್ಮ ತೋಟದಲ್ಲಿ ಕಳೆ ಕಟಾವು ಯಂತ್ರದಲ್ಲಿ ಕಾಡು ಕಡಿಯುತ್ತಿದ್ದ ಸಂದರ್ಭ ಕಣಜದ ಹುಳದ ಗುಂಪು ಕಚ್ಚಿ ಗಂಭೀರ ಗಾಯಗೊಂಡ ಬಳಿಕ ಸ್ಥಳೀಯರು ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಣಜದ ಹುಳ ಕಡಿದು ಪೆರಾಜೆಯ ವ್ಯಕ್ತಿ ಸಾವು Read More »

ಬೆಳ್ತಂಗಡಿ : ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ನಾಪತ್ತೆ

ವಿದ್ಯಾರ್ಥಿಗಳ ತಂಡವೊಂದು ನದಿಗೆ ಈಜಲು ಹೋದಾಗ, ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿ ನದಿಯ ನೀರಿನಲ್ಲಿ ಮುಳುಗಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜೀರಡ್ಕ ಎಂಬಲ್ಲಿ ಮೇ 19ರಂದು ಸಂಜೆ ನಡೆದಿದೆ.ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಸಿಇ (ECE)ವಿದ್ಯಾರ್ಥಿ, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ನಿವಾಸಿ ಶ್ರೀಪೂರ್ಣ (21) ಎಂದು ಗುರುತಿಸಲಾಗಿದೆ.ಮಂಗಳವಾರ ಮೇ 19ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಏಳು ಜನ ಸ್ನೇಹಿತರ ತಂಡವು ಪಜೀರಡ್ಕದ ನೇತ್ರಾವತಿ ನದಿಗೆ ಈಜಾಡಲು ತೆರಳಿತ್ತು.

ಬೆಳ್ತಂಗಡಿ : ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ನಾಪತ್ತೆ Read More »

ಕುಲ್ಕುಂದ ಸುಬ್ರಹ್ಮಣ್ಯ :- ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ, ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಬಸವೇಶ್ವರ ದೇವಸ್ಥಾನ (ರಿ) ಬಸವನಮೂಲೆ ಕುಲ್ಕುಂದ ಸುಬ್ರಹ್ಮಣ್ಯ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಸುಬ್ರಹ್ಮಣ್ಯ ವಲಯ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿ ಕುಲ್ಕುಂದ ಇದರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ 19ರಂದು

ಕುಲ್ಕುಂದ ಸುಬ್ರಹ್ಮಣ್ಯ :- ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ Read More »

ಜೂ. ೧೨ರಿಂದ – ೧೪ರವರೆಗೆ ಸುಳ್ಯದಲ್ಲಿ ಹಲಸು ಮತ್ತು ಮಾವು ಮೇಳ

ಜೂ. ೧೨ರಿಂದ ೧೪ರವರೆಗೆ ೩ ದಿನಗಳ ಕಾಲ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದ ವಠಾರದಲ್ಲಿ ಟೀಂ ಉಬಾರ್ ಉಪ್ಪಿನಂಗಡಿ, ಸುಳ್ಯ ರೈತ ಉತ್ಪಾದಕ ಕಂಪೆನಿ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ., ಸುದ್ದಿ ಕೃಷಿ ಅರಿವು ಕೇಂದ್ರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿರುವ ಹಲಸು ಮತ್ತು ಮಾವು ಮೇಳದ ದ್ವಿತೀಯ ಹಂತದ ಪೂರ್ವಭಾವಿ ಸಭೆ ಮೇ. ೧೯ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.ಮೇಳದ ಗೌರವಾಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್,

ಜೂ. ೧೨ರಿಂದ – ೧೪ರವರೆಗೆ ಸುಳ್ಯದಲ್ಲಿ ಹಲಸು ಮತ್ತು ಮಾವು ಮೇಳ Read More »

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ತಮ್ಮ ಭಾಗದ ಸಮಸ್ಯೆ, ಬೇಡಿಕೆಗಳು ಮತ್ತು ಅಹವಾಲುಗಳನ್ನು ಸಂಸದರ ಗಮನಕ್ಕೆ ತಂದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಂಸದರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮಸ್ಯೆಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಲ್ಲದೇ ಸಾರ್ವಜನಿಕ ಭೇಟಿ ವೇಳೆ ವಿವಿಧ

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ Read More »

ಅಡ್ತಲೆ : ಮರ ಬಿದ್ದು ಹಾನಿ

ಅಡ್ತಲೆ ಶಾಲೆಯ ಬಳಿ ಬೃಹತ್ ಆಕಾರದ ಮೇ ಪ್ಲವರ್ ಮರ ಆರಂತೋಡು -ಏಳಿಮಲೆ ರಸ್ತೆಗೆ ಅಡ್ಡಲಾಗಿ ಬಿದ್ದು ಅಡ್ತಲೆ ಶಾಲಾ ಗೆಟ್, ಕಾಂಪೌಂಡ್, ವಿದ್ಯುತ್ ಕಂಬಗಳು ಹಾನಿಯಾದ ಘಟನೆ ಮೇ.19ರಂದು ವರದಿಯಾಗಿದೆ.ಬಳಿಕ ಅಡ್ತಲೆಯ ಯುವಕರು ರಸ್ತೆ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟರು.

ಅಡ್ತಲೆ : ಮರ ಬಿದ್ದು ಹಾನಿ Read More »

ಇಂದು ಪವರ್ ಕಟ್

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ಮೇ. 19 ಮಂಗಳವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕಾರ್ಯವನ್ನು ಹೊಂದಿದೆ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪೋ, ತೊಡಿಕಾನ, ಕೋಲ್ಟಾರ್, ದೇವರಗುಂಡ, ಅಜ್ಜವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00 ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಒದಗಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಪವರ್ ಕಟ್ Read More »

ತೊಡಿಕಾನ : ಕಿರಣ್ ಚಾಂಬಾಡು ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಚಾಂಬಾಡು ನಿವಾಸಿ ಐತ್ತಪ್ಪ ಅವರ ಮಗ ಕಿರಣ್ ಮಡಿಕೇರಿಯಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮ್ರತರು ಇಬ್ಬರು ಸಹೋದರು,ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ತೊಡಿಕಾನ : ಕಿರಣ್ ಚಾಂಬಾಡು ನಿಧನ Read More »

ಜಯಚಂದ್ರ ತೊಡಿಕಾನ ನಿಧನ

ತೊಡಿಕಾನ ಗ್ರಾಮದ ಕಲ್ಲಪಳ್ಳಿ ನಿವಾಸಿ ಬಳ್ಳದಲ್ಲಿ ನೆಲೆಸಿದ್ದ, ಜಯಚಂದ್ರ (57ವ.) ಹೃದಯಾಘಾತದಿಂದ ಮೇ.18ರಂದು ರಾತ್ರಿ ನಿಧಾನರಾಗಿರುವುದಾಗಿತಿಳಿದುಬಂದಿದೆ. ಇವರು ಬಳ್ಪ ಪೇಟೆಯಲ್ಲಿ ಪ್ಯಾನ್ಸಿ ಅಂಗಡಿಯನ್ನು ನಡೆಸುತ್ತಿದ್ದರು‌.ಮೃತರು ಪತ್ನಿ, ಪುತ್ರಿ, ಸಹೋದರ, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಂತರ ಬಳ್ಳದಲ್ಲೇ ನೆರವೇರಲಿರುವುದಾಗಿ ತಿಳಿದುಬಂದಿದೆ.ಜಯಚಂದ್ರ ಕ್ರಷಿ ಬಿಂಬ ಪತ್ರಿಕೆಯ ಸಂಪಾದಕ ರಾಧಾಕ್ರಷ್ಣ ತೊಡಿಕಾನ ಅವರ ಸಹೋದರ.

ಜಯಚಂದ್ರ ತೊಡಿಕಾನ ನಿಧನ Read More »

ಸುಳ್ಯ : ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಶಿಬಿರ

ಸುಳ್ಯ ತಾಲೂಕು ಮಾಹಿತಿ ಕೇಂದ್ರ ಮತ್ತು ಮುಸ್ಲಿಂ ಯೂತ್ ಫೆಡರೇಶನ್ ಇದರ ವತಿಯಿಂದ ಸುಳ್ಯ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಶಿಬಿರ ಮತ್ತು SSLCಯಲ್ಲಿ ಮತ್ತು PUC ಯಲ್ಲಿ ರಾಜ್ಯಮಟ್ಟದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಹಾರೈಸಲಾಯಿತು.

ಸುಳ್ಯ : ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಶಿಬಿರ Read More »

error: Content is protected !!
Scroll to Top