ಕುಲ್ಕುಂದ ಸುಬ್ರಹ್ಮಣ್ಯ :- ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ, ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಬಸವೇಶ್ವರ ದೇವಸ್ಥಾನ (ರಿ) ಬಸವನಮೂಲೆ ಕುಲ್ಕುಂದ ಸುಬ್ರಹ್ಮಣ್ಯ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಸುಬ್ರಹ್ಮಣ್ಯ ವಲಯ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿ ಕುಲ್ಕುಂದ ಇದರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ 19ರಂದು ಸುಬ್ರಹ್ಮಣ್ಯ ವಲಯ ಭಜನಾ ಪರಿಷತ್ ನ ಅಧ್ಯಕ್ಷರಾದ ಚಂದ್ರಶೇಖರ ಕೊಂದಳರವರ ಅಧ್ಯಕ್ಷತೆಯಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರವರಾದ ಹರೀಶ್ ಇಂಜಾಡಿರವರು ಮಾತನಾಡಿ ಮಕ್ಕಳಿಗೆ ಭಜನೆಯಿಂದ ಮನಸು ಶುದ್ಧಿಯಾಗಿ ಏಕಾಗ್ರತೆಯನ್ನು ನೀಡುತ್ತದೆ. ಇದರಿಂದ ತಪ್ಪು ದಾರಿಗೆ ಹೋಗುವಂತದು ತಪ್ಪುತ್ತದೆ. ಮನೆ ಮನೆಗಳಲ್ಲಿ ಮಕ್ಕಳು ಭಜನೆಯನ್ನು ಮಾಡುವ ಹಾಗೆ ಪೋಷಕರು ಪ್ರೇರಣೆಯನ್ನು ನೀಡಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡರವರು ಮಾತನಾಡುತ್ತ, ಯೋಜನೆಯಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮೂಲಕ ತಾಲೂಕಿನಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ತಾಲೂಕಿನಲ್ಲಿ ಈಗಾಗಲೇ 5 ಕಡೆಗಳಲ್ಲಿ ಮಕ್ಕಳಿಗೆ ಭಜನಾ ಕಾರ್ಯಕ್ರಮಗಳನ್ನು ನಡೆಸುತ್ತಾ ಇದ್ದೇವೆ. ಇದರಿಂದ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನೀಡುವ ಮೂಲಕ ಪ್ರೇರಣೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಭಜನೋತ್ಸವ ಸಮಿತಿಯ ಅಧ್ಯಕ್ಷರಾದ ಡಾ| ರವಿ ಕಕ್ಕೆಪದವುರವರು, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರು, ಶ್ರೀ ಬಸವೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗಿರಿಧರ ಸ್ಕಂದರವರು ಶುಭಕೋರಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ (ರಿ)ನ ಅಧ್ಯಕ್ಷರಾದ ಸೋಮಶೇಖರ ಪೈಕ, ತಾಲೂಕು ಭಜನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ ಬಸವನಮೂಲೆ ಕುಲ್ಕುಂದ, ಕುಲ್ಕುಂದ ಒಕ್ಕೂಟದ ಅಧ್ಯಕ್ಷರಾದ ಹರಿಪ್ರಸಾದ್, ಕಲ್ಲಾಜೆ ಒಕ್ಕೂಟದ ಅಧ್ಯಕ್ಷರಾದ ಮೋನಪ್ಪ ಗೌಡ, ಸುಬ್ರಹ್ಮಣ್ಯ ಒಕ್ಕೂಟದ ಉಪಾಧ್ಯಕ್ಷರಾದ ರತ್ನಾವತಿ, ಭಜನಾ ತರಬೇತಿದಾರರಾದ ನಳಿನಾಕ್ಷಿ ವಿ ಆಚಾರ್ಯರವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ತರಬೇತಿ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಮಾತಾ ಪಿತ್ರು ವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಭಜನಾ ಪರಿಷತ್ ನ ಪದಾಧಿಕಾರಿಗಳು, ಸಂಪಾಜೆ ಮತ್ತು ಸುಳ್ಯ ವಲಯಗಳ ಭಜನಾ ಪರಿಷತ್ ನ ಅಧ್ಯಕ್ಷರುಗಳು, ವಲಯ ಒಕ್ಕೂಟಗಳ ಪದಾಧಿಕಾರಿಗಳು, ವಿಪತ್ತು ನಿರ್ವಹಣಾ ಘಟಕಗಳ ಸ್ವಯಂ ಸೇವಕರು, ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಒಕ್ಕೂಟಗಳ ಸದಸ್ಯರು, ಸೇವಾಪ್ರತಿನಿಧಿಗಳು, ಭಜನಾ ತರಬೇತಿಯ ಮಕ್ಕಳು ಮತ್ತು ಅವರ ಪೋಷಕರುಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿದರು. ಕೊಲ್ಲಮೊಗ್ರ ಬಿ ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ಸಿ ದೋಲನರವರು ಕಾರ್ಯನಿರೂಪಿಸಿದರು. ಸುಬ್ರಹ್ಮಣ್ಯ ವಲಯ ಭಜನಾ ಪರಿಷತ್ ನ ನಿರ್ದೇಶಕರಾದ ಸತೀಶ್ ಟಿ ಎನ್ ರವರು ಧನ್ಯವಾದವಿತ್ತರು.



































































































Leave a Comment

Your email address will not be published. Required fields are marked *

error: Content is protected !!
Scroll to Top