ಸಂಕಷ್ಟದಲ್ಲಿದ್ದವರಿಗೆ ಮಾಡುವ ದಾನ ಶ್ರೇಷ್ಠ ದಾನ : ರಾಜೇಶ್ ರೈ ಮೇನಾಲ

ಸಂಕಷ್ಟದಲ್ಲಿವರಿಗೆ ದಾನ ಮಾಡಿದ್ದಾಗ ಅದು ಶ್ರೇಷ್ಠ ದಾನವಾಗುತ್ತದೆ ಎಂದು ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ರೈ ಮೇನಾಲ ಹೇಳಿದರು.
ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದದಲ್ಲಿ ಇಲ್ಲಿಯ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಯವರ “ಧರ್ಮ ಕ್ಷೇತ್ರವೇ ಯುದ್ಧಕ್ಷೇತ್ರವಾಗಬಾರದು” ಎಂಬ 136ನೇ ಕೃತಿಮಾಲೆ ಬಿಡುಗಡೆಗೊಳಿಸಿ ಮತ್ತು ಆಶ್ರಮದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು‌ ಉಚಿತವಾಗಿ ವಿತರಿಸಿ ಮಾತನಾಡಿದರು.
ಭಾರತದ ಪ್ರಾಚಿನ ಕಾಲದಲ್ಲಿ ಅನ್ನ,ನೀರು,ವಿದ್ಯೆ,ವೈದ್ಯ ಸೇವೆ ದುಡ್ಡಿಗೆ ಸಿಗುತ್ತಿರಲಿಲ್ಲ.ಅದನ್ನು ದಾನ ನೀಡುತ್ತಿದ್ದರು.ಇದು ನಮ್ಮ ದೇಶದ ವಿಶೇಷತೆ,ಆ ಕಾಲದಲ್ಲಿ ಹೊಟೇಲ್ ಪರಿಕಲ್ಪಣೆ ಇರಲಿಲ್ಲ.ಬೆಲ್ಲ ನೀರು,ಅನ್ನ ಪ್ರತಿಯೊಂದು ಮನೆಯ ಮುಂದೆ ಇರುತ್ತಿತ್ತು.ದಾನ ಮಾಡಿ ನಾವು ಸಂತೋಷ ಪಡುತ್ತಿದ್ದರು.ಇಂದು ದಾನ ಮಾಡುವ ಕೆಲಸವನ್ನು ಇಲ್ಲಿಯ ಸ್ವಾಮಿಗಳು ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಹೇಳಿದರು.
ಸ್ವಾಮೀಜಿಯವರು ಮಾತನಾಡಿ ಧರ್ಮ ಸಂಸ್ಕಾರ ಇಟ್ಟುಕೊಂಡು ಬಾಳಿದಾಗ ಬದುಕು ಸಾರ್ಥಕವಾಗುತ್ತದೆ.ಧರ್ಮ‌ಕ್ಷೇತ್ರದಲ್ಲಿ ಅಧರ್ಮ ನಡೆಯಬಾರದು.ವಿದ್ಯಾರ್ಥಿಗಳು ಒಳ್ಳೆಯ ವಿದ್ಯೆ ಬುದ್ದಿ ಕಲಿತು ಸುಸಂಸ್ಕೃತರಾಗಿ ಬಾಳಿ ಬದುಕಬೇಕು ಎಂದು ಹೇಳಿದರು.
ಡಾ.ಸಾಯಿಗೀತಾ,ಹಿರಿಯರಾದ ಶಿರಾಜೆ ಬಾಲಕೃಷ್ಣ,ಶಿಕ್ಷಕ ಅಶೋಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಶಿಕ್ಷಕಿ ಸುನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಆಶ್ರಮದ ಟ್ರಸ್ಟಿ ಪ್ರಣವಿ,ನಿವೃತ್ತ ಎ.ಎಸ್.ಐ ಕುಶಾಲಪ್ಪ ಗೌಡ ಅತ್ಯಾಡಿ ಇತರರು ಉಪಸ್ಥಿತರಿದ್ದರು.











































































































Leave a Comment

Your email address will not be published. Required fields are marked *

error: Content is protected !!
Scroll to Top